ಕ್ರೀಡೆಮೈಸೂರು

ಆತ್ಮರಕ್ಷಣೆಗಾಗಿ ಕರಾಟೆ ಕಲಿಯಲು ಇಟಿದೋ ಮಾತ್ಸೂಯೊ ಸಲಹೆ

ಮೈಸೂರು ವಿಶ್ವವಿದ್ಯಾಲಯದ ಜಿಮ್ನಾಶಿಯಂ ಹಾಲ್ ನಲ್ಲಿ ನಾಗ ಮಾರ್ಷಲ್ ಆರ್ಟ್ಸ್ ಅಕಾಡೆಮಿ ವತಿಯಿಂದ ಕಾರಾಟೆ ಚಾಂಪಿಯನ್ ಷಿಪ್ ಗೆ ಭಾನುವಾರ ಚಾಲನೆ ನೀಡಲಾಯಿತು.

ಜಪಾನ್ ನ ಗ್ರ್ಯಾಂಡ್ ಮಾಸ್ಟರ್ ಇಟಿದೋ ಮಾತ್ಸೂಯೊ ಕರಾಟೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಕರಾಟೆಯನ್ನು ಆತ್ಮರಕ್ಷಣೆಗಾಗಿ ಪ್ರತಿಯೊಬ್ಬರೂ ಕಲಿಯಲೇಬೇಕು. ಅದರಲ್ಲೂ ಮುಖ್ಯವಾಗಿ ಯುವತಿಯರು ಕರಾಟೆಯನ್ನು ಕಲಿತರೆ ತುಂಬಾನೇ ಒಳ್ಳೆಯದು. ಕೆಲವು ಕಡೆ ಶಾಲೆಗಳಲ್ಲಿ ಈಗ ಕರಾಟೆಯನ್ನೂ ಸಹ ಒಂದು ವಿಷಯವಾಗಿ ರೂಪಿಸಿದ್ದಾರೆ ನಿಜಕ್ಕೂ ಶ್ಲಾಘನೀಯ ಎಂದರು.

ಈ ಸಂದರ್ಭ ಕೈಕಾನ್ ಕರಾಟೆ ಸಂಸ್ಥೆ ಅಧ್ಯಕ್ಷ ಆರ್ಯ ನಾಗಾರ್ಜುನ್ ಬಂತೆ ಸುರೈಸಾಸಿ, ಕರಾಟೆ ತರಬೇತುದಾರ ಬ್ರಿಜೇಶ್ ಪ್ರಸಾದ್,  ಜಿಲ್ಲಾಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಶನ್ ಕಾರ್ಯದರ್ಶಿ ಅಲ್ತಾಫ್ ಪಾಷಾ, ಲಾರಿ ಮಾಲಿಕರ ಸಂಘದ ಅಧ್ಯಕ್ಷ ಟಿ.ರೇವಣ್ಣ, ಸಮಾಜಸೇವಕ ಆನಂದ್ ಮತ್ತಿತರರು ಉಪಸ್ಥಿತರಿದ್ದರು.

ವಿವಿಧೆಡೆಯಿಂದ ಆಗಮಿಸಿದ 150ಕ್ಕೂ ಅಧಿಕ ಕರಾಟೆ ಪಟುಗಳು ಪಾಲ್ಗೊಂಡಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: