
ಕರ್ನಾಟಕಪ್ರಮುಖ ಸುದ್ದಿ
ಚಾಮರಾಜನಗರ ಜಿಲ್ಲೆಗೆ ತಲುಪಿದ 4,000 ಡೋಸ್ ಲಸಿಕೆ
ರಾಜ್ಯ( ಚಾಮರಾಜನಗರ)ಜ.15:- ಜ.16ರಿಂದ ಕೋವಿಡ್ ಲಸಿಕೆ ವಿತರಣೆ ಆರಂಭವಾಗಲಿದ್ದು, ಜಿಲ್ಲೆಗೆ ಗುರುವಾರ 4,000 ಡೋಸ್ ಲಸಿಕೆ ತಲುಪಿದೆ.
ಈ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ಮಾತನಾಡಿ ಕೋವಿಶೀಲ್ಡ್ ಲಸಿಕೆಯನ್ನು ಆರೋಗ್ಯ ಇಲಾಖೆ ಪೂರೈಸಿದ್ದು, ಇನ್ನೊಂದು ಲಸಿಕೆ ಕೋವ್ಯಾಕ್ಸಿನ್ ಕೂಡ ಬರುವ ನಿರೀಕ್ಷೆ ಇದೆ. ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಆರೋಗ್ಯ ಇಲಾಖೆಯ ಶೀಥಲೀಕರಣ ಘಟಕದಲ್ಲಿ ಲಸಿಕೆ ಇಡಲಾಗಿದೆ.
ಮೊದಲ ಹಂತದಲ್ಲಿ ಜಿಲ್ಲೆಯ 6,363 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲು ತೀರ್ಮಾನಿಸಲಾಗಿದೆ. ಆರಂಭದಲ್ಲಿ 816 ಮಂದಿಯನ್ನು ಲಸಿಕೆ ನೀಡುವುದಕ್ಕಾಗಿ ಪಟ್ಟಿ ಮಾಡಲಾಗಿದೆ. ಈಗಾಗಲೇ ಲಸಿಕೆ ಹಾಕುವ ತಾಲೀಮು ನಡೆಸಲಾಗಿದ್ದು, 16ರಿಂದ ವಿತರಣೆ ನಡೆಯಲಿದೆ.
ಮೊದಲ ಬ್ಯಾಚ್ನಲ್ಲಿ 4,000 ಡೋಸ್ಗಳು ಬಂದಿವೆ. ಎರಡನೇ ಬ್ಯಾಚ್ನಲ್ಲಿ ಉಳಿದ ಡೋಸ್ಗಳು ಬರಲಿವೆ. ಲಸಿಕೆ ವಿತರಣೆಗೆ ಎಲ್ಲ ಸಿದ್ಧತೆಗಳನ್ನು ಮಾಡಿದ್ದೇವೆ ಎಂದು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)