
ಕರ್ನಾಟಕಪ್ರಮುಖ ಸುದ್ದಿ
ಸರ್ಕಾರ ರೈತರನ್ನು ನಾಶ ಮಾಡುವುದಕ್ಕಾಗಿ ಹೊಸ ಕೃಷಿ ಕಾನೂನುಗಳ ಮೂಲಕ ಪಿತೂರಿ ನಡೆಸಿದೆ : ರಾಹುಲ್ ಗಾಂಧಿ ಆರೋಪ
ದೇಶ(ತಮಿಳ್ನಾಡು)ಜ.15:- ಸರ್ಕಾರ ರೈತರನ್ನು ನಾಶ ಮಾಡುವುದಕ್ಕಾಗಿ ಹೊಸ ಕೃಷಿ ಕಾನೂನುಗಳ ಮೂಲಕ ಪಿತೂರಿ ನಡೆಸಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಸಂಕ್ರಾಂತಿ ಹಬ್ಬದಂದು ತಮಿಳುನಾಡಿಗೆ ಭೇಟಿ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರ ಸರ್ಕಾರ, ಕೃಷಿ ಕಾನೂನುಗಳ ವಿರುದ್ಧ ವಾಗ್ದಾಳಿ ನಡೆಸಿದ್ದು, ತಮ್ಮ ಪಕ್ಷ ರೈತರ ಜೊತೆ ನಿಲ್ಲಲಿದೆ ಎಂದು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಕೇಂದ್ರ ಸರ್ಕಾರ ಕೃಷಿ ಕಾನೂನುಗಳ ಮೂಲಕ ತನ್ನ ಇಬ್ಬರು ಅಥವಾ ಮೂವರು ಸ್ನೇಹಿತರಿಗೆ ಲಾಭ ಮಾಡಿಕೊಡಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರ ರೈತರನ್ನು ಕೇವಲ ನಿರ್ಲಕ್ಷಿಸುತ್ತಿಲ್ಲ, ಆದರೆ ನಾಶ ಮಾಡಲು ಯತ್ನಿಸುತ್ತಿದೆ, ನಿರ್ಲಕ್ಷ್ಯ ಮಾಡುವುದಕ್ಕೂ ನಾಶ ಮಾಡುವುದಕ್ಕೂ ವ್ಯತ್ಯಾಸವಿದೆ, ಕೇಂದ್ರ ಸರ್ಕಾರ ರೈತರದ್ದೆಲ್ಲವನ್ನೂ ಅವರ ಮೂವರು ಸ್ನೇಹಿತರಿಗೆ ನೀಡಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. (ಏಜೆನ್ಸೀಸ್,ಎಸ್.ಎಚ್)