ಕ್ರೀಡೆಪ್ರಮುಖ ಸುದ್ದಿವಿದೇಶ

ಥಾಯ್ಲೆಂಡ್ ಓಪನ್ ಮಹಿಳೆಯರ ಸಿಂಗಲ್ಸ್ ‌ನ ಪ್ರಿ ಕ್ವಾರ್ಟರ್ ಫೈನಲ್ ‌ನಲ್ಲಿ ಸೈನಾ ನೆಹ್ವಾಲ್ ಗೆ ಸೋಲು

ದೇಶ( ಬ್ಯಾಂಕಾಕ್)ಜ.15:- ಥಾಯ್ಲೆಂಡ್ ಓಪನ್ ಮಹಿಳೆಯರ ಸಿಂಗಲ್ಸ್ ‌ನ ಪ್ರಿ ಕ್ವಾರ್ಟರ್ ಫೈನಲ್ ‌ನಲ್ಲಿ ಭಾರತದ ಬ್ಯಾಡ್ಮಿಂಟನ್ ಸ್ಟಾರ್ ಸೈನಾ ನೆಹ್ವಾಲ್ ವಿಶ್ವದ 12ನೇ ಕ್ರಮಾಂಕದ ಥಾಯ್ಲೆಂಡ್‌ ನ ಬುಸಾನನ್ ಒಂಗ್ಬಾಮ್ರಂಗ್‌ ಫಾನ್ ವಿರುದ್ಧ ಸೋಲು ಅನುಭವಿಸಿದ್ದಾರೆ.

ಸೈನಾ ನೆಹ್ವಾಲ್ ಅವರು ಬುಸಾನನ್ ವಿರುದ್ಧ 21-23, 14-21, 16-21ಅಂತರದಲ್ಲಿ ಸೋಲು ಅನುಭವಿಸಿದರು.

ಸೈನಾ ತನ್ನ ಎದುರಾಳಿಗಿಂತ ಹೆಚ್ಚು ಬಲಶಾಲಿಯಾಗಿ ಆಟವನ್ನು ಪ್ರಾರಂಭಿಸಿದ್ದರು. ಮೊದಲ ಸೆಟ್‌ ನ್ನು 23-21ಅಂತರದಿಂದ ಮೇಲುಗೈ ಸಾಧಿಸಿದ್ದರು. ಎರಡನೇ ಸೆಟ್‌ ನ್ನು 14-21 ಅಂತರದಲ್ಲಿ ಕಳೆದುಕೊಂಡರು ಮತ್ತು ಮೂರನೇ ಸೆಟ್‌ನಲ್ಲಿ ವಿರಾಮದ ವೇಳೆಗೆ 1-11ರಿಂದ ಕೆಳಗಿಳಿದ ನಂತರ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಬುಧವಾರ ಸೈನಾ ಮಲೇಶ್ಯದ ಕಿಸೋನಾ ಸೆಲ್ವಾಡುರೈ ಅವರನ್ನು ನೇರ ಸೆಟ್‌ ಗಳಲ್ಲಿ ಸೋಲಿಸಿ ಎರಡನೇ ಸುತ್ತು ಪ್ರವೇಶಿಸಿದ್ದರು. ಇದೇ ವೇಳೆ ಕೆ. ಶ್ರೀಕಾಂತ್ ಕಾಲು ನೋವಿನಿಂದಾಗಿ ಕೂಟದಿಂದ ನಿರ್ಗಮಿಸಿದ್ದಾರೆ. ಶ್ರೀಕಾಂತ್ ಗುರುವಾರ ತಮ್ಮ ಎರಡನೇ ಸುತ್ತಿನ ಪಂದ್ಯದಿಂದ ಹೊರಬಂದಿದ್ದಾರೆ ಎಂದು ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ ತಿಳಿಸಿದೆ. ಇದರಿಂದಾಗಿ ಎದುರಾಳಿ ಲೀ ಝಿ ಜಿಯಾ ವಾಕ್ ‌ಓವರ್ ಮೂಲಕ ಮುಂದಿನ ಸುತ್ತು ಪ್ರವೇಶಿಸಿದರು. ಸೌರಭ್ ವರ್ಮಾ ವಿರುದ್ಧ ಗೆಲುವು ಸಾಧಿಸಿದ ನಂತರ ಶ್ರೀಕಾಂತ್ ಬುಧವಾರ ಎರಡನೇ ಸುತ್ತಿಗೆ ತಲುಪಿದ್ದರು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: