ಮೈಸೂರು

ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಿಂಬಾಗಿಲು ಮೀಟಿ ಚಿನ್ನಾಭರಣ ಕಳುವು

ಮೈಸೂರು, ಜ.15:- ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಿಂಬಾಗಿಲನ್ನು ಮೀಟಿ ಒಳನುಗ್ಗಿದ ಕಳ್ಳರು ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ವಿಜಯನಗರದಲ್ಲಿ ನಡೆದಿದೆ.
ವಿಜಯ ನಗರದ ಮನೆಯೊಂದರ ಬೀಗ ಮುರಿದ ಕಳ್ಳರು ಒಂದು ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಹಾಗೂ ಇತರ ಪರಿಕರಗಳನ್ನು ದೋಚಿದ್ದಾರೆ.
ವಿಜಯನಗರದ ಮೂರನೇ ಹಂತದ ನಿವಾಸಿ ಪುಷ್ಪಲತಾ ಎಂಬವರು ಸಂಸಾರ ಸಮೇತ ಜ.8ರಂದು ಮನೆಗೆ ಬುಗ ಹಾಕಿಕೊಂಡು ಊರಿಗೆ ತೆರಳಿದ್ದರು. ಮನೆಗೆ ಮರಳಿದಾಗ ಮನೆಯ ಹಿಂಬಾಗಿಲನ್ನು ಮೀಟಿ ಒಳಪ್ರವೇಶಿಸಿದ ಕಳ್ಳರು ಒಂದು ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣಗಳನ್ನು ಮತ್ತು ಇತರ ಪರಿಕರಗಳನ್ನು ಕಳುವು ಮಾಡಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಜಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: