ಸುದ್ದಿ ಸಂಕ್ಷಿಪ್ತ

ಗೃಹಭಾಗ್ಯ ಯೋಜನೆಯಡಿ ಮನೆ ನಿರ್ಮಿಸುವವರಿಗೆ ಧನಸಹಾಯ :ಅರ್ಜಿ ಆಹ್ವಾನ:

ಮೈಸೂರು,ಜ.15:- ತಿ.ನರಸೀಪುರ ಪುರಸಭಾ ವ್ಯಾಪ್ತಿಯಲ್ಲಿ 2020-21ನೇ ಸಾಲಿನಲ್ಲಿ ಪೌರಕಾರ್ಮಿಕ ಗೃಹಭಾಗ್ಯ ಯೋಜನೆಯಡಿ ಮನೆ ನಿರ್ಮಿಸುವವರಿಗೆ ಪಕ್ಕಾಮನೆ ಯೋಜನೆಯಡಿ ಧನಸಹಾಯ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತರು ಕಚೇರಿಯಲ್ಲಿ ಅರ್ಜಿಯನ್ನು ಪಡೆದು ತಹಸಿಲ್ದಾರ್ ಅವರಿಂದ ಪಡೆದಿರುವ ಪ್ರಸ್ತುತ ಸಾಲಿನ ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರದ ನಕಲು, ರೇಷನ್ ಕಾರ್ಡ್ ಅಥವಾ ಚುನಾವಣಾ ಗುರುತಿನ ದಾಖಲೆ, ಆಧಾರ್ ಕಾರ್ಡ್ ನಕಲು ಪ್ರತಿ, ಬ್ಯಾಂಕ್ ಪಾಸ್ಪುಸ್ತಕದ ಜೆರಾಕ್ಸ್ ಪ್ರತಿ, ಕೆ.ಎಂ.ಎಫ್ – 24 ಮತ್ತು ಕಂದಾಯ ರಶೀದಿ, ಪೌರಕಾರ್ಮಿಕ ಗೃಹ ಭಾಗ್ಯ ಯೋಜನೆಯಡಿ ನೀಡಿರುವ ಮನೆ ಮಂಜೂರಾತಿ ಪತ್ರ ಮತ್ತು ಪ್ಲಾನ್, ಎಸ್ಟಿಮೆಂಟ್ ಹಾಗೂ ಇತ್ತೀಚಿನ ಎರಡು ಭಾವಚಿತ್ರ ಲಗ್ಗತ್ತಿಸಿ ಜನವರಿ ಜನವರಿ 16ರೊಳಗೆ ಸಲ್ಲಿಸಬೇಕೆಂದು ತಿ.ನರಸೀಪುರದ ಪುರಸಭೆಯ ಮುಖ್ಯಾಧಿಕಾರಿ ಅಶೋಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: