ಸುದ್ದಿ ಸಂಕ್ಷಿಪ್ತ

ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನ

ಮೈಸೂರು,ಜ 15 :- ತಿ.ನರಸೀಪುರ ಪುರಸಭಾ ವ್ಯಾಪ್ತಿಯಲ್ಲಿ 2020-21ನೇ ಸಾಲಿನಲ್ಲಿ ಶೇ.24.10 ಹಾಗೂ ಶೇ.7.25 ಎನ್.ಎಫ್.ಸಿ ಅನುದಾನದ ಯೋಜನೆಯಡಿ ಬಿ.ಇ ಹಾಗೂ ಎಂ.ಬಿ.ಬಿ.ಎಸ್ ವಿದ್ಯಾಭ್ಯಾಸ ಮಾಡುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಂದ ವಿವಿಧ ಸೌಲಭ್ಯಗಳಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಕಚೇರಿಯಲ್ಲಿ ಅರ್ಜಿಯನ್ನು ಪಡೆದು ತಹಶೀಲ್ದಾರ್ ಅವರಿಂದ ಪಡೆದಿರುವ ಪ್ರಸ್ತುತ ಸಾಲಿನ ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರದ ನಕಲು, ರೇಷನ್ ಕಾರ್ಡ್ ಅಥವಾ ಚುನಾವಣಾ ಗುರುತಿನ ದಾಖಲೆ, ಆಧಾರ್ ಕಾರ್ಡ್ ನಕಲು ಪ್ರತಿ, ಪ್ರಸ್ತುತ ಸಾಲಿನಲ್ಲಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಗ್ಗೆ ಧೃಢೀಕರಣ ಪತ್ರ, ಹಿಂದಿನ ವರ್ಷಗಳ ಅಂಕಪಟ್ಟಿಯ ನಕಲು ಪ್ರತಿ, ಸಮಾಜ ಕಲ್ಯಾಣ ಇಲಾಖೆ & ಇತರೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ವ್ಯಾಸಂಗ ಮಾಡುತ್ತಿರುವ ಕಾಲೇಜಿನಿಂದ ಲ್ಯಾಪ್ಟಾಪ್ ಪಡೆದಿಲ್ಲದಿರುವ ಬಗ್ಗೆ ಧೃಢೀಕರಣ ಪತ್ರ ಮತ್ತು ಇತ್ತೀಚಿನ ಭಾವಚಿತ್ರಗಳನ್ನು ಲಗತ್ತಿಸಿ ಜನವರಿ 16ರೊಳಗೆ ಸಲ್ಲಿಸಬೇಕೆಂದು ತಿ.ನರಸೀಪುರ ಪುರಸಭೆಯ ಮುಖ್ಯಾಧಿಕಾರಿ ಅಶೋಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: