ಕರ್ನಾಟಕಪ್ರಮುಖ ಸುದ್ದಿ

ಅತೃಪ್ತ ಶಾಸಕರಿಗೆ ನೀತಿ ಪಾಠ ಹೇಳಿದ ಶಾಸಕ ಸಿ.ಟಿ.ರವಿ

ಬೆಂಗಳೂರು,ಜ.15- ಸಂಪುಟದಲ್ಲಿ ಸ್ಥಾನಮಾನ ಸಿಗದೆ ಇರುವುದಕ್ಕೆ ಅಸಮಾಧಾನಗೊಂಡಿರುವ ಶಾಸಕರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ನೀತಿ ಪಾಠ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ತನ್ನ ಬೂತನ್ನು ಗೆಲ್ಲಿಸುವುದು ಹೇಗೆ ಎಂಬುದನ್ನು ಯೋಚಿಸುತ್ತಾ, ಕಾರ್ಯತತ್ಪರನಾಗಿರುತ್ತಾನೆ. ಕಾರ್ಯಕರ್ತರ “ನಿಸ್ವಾರ್ಥ” ತ್ಯಾಗದ ಮುಂದೆ ಬೇರೆ ಯಾವ ತ್ಯಾಗವೂ ದೊಡ್ಡದಲ್ಲ. ಇವತ್ತು ನಾವೇನೇ ಆಗಿದ್ದರೂ ಅದು ನಮ್ಮ ತಳಮಟ್ಟದ ಕಾರ್ಯಕರ್ತ ಕೊಟ್ಟ ಭಿಕ್ಷೆಯೇ ಹೊರತು ಬೇರೆ ಏನೂ ಅಲ್ಲ ಎಂದಿದ್ದಾರೆ.

ಅಲ್ಲದೆ, ಅಧಿಕಾರದಲ್ಲಿರುವವರನ್ನು ನೋಡಿಯೂ ಇರದ, ನೋಡುವ ಇಚ್ಚೆಯೂ ಇರದ ಕೋಟ್ಯಾಂತರ ಕಾರ್ಯಕರ್ತರ ತ್ಯಾಗದ ಫಲಸ್ವರೂಪ ನಾವಿಂದು ಇಲ್ಲಿ ನಿಂತಿದ್ದೇವೆ. ಆ ಕಾರ್ಯಕರ್ತ ಅಧಿಕಾರದಲ್ಲಿರುವವರ ಮನೆ, ಕಚೇರಿ, ವಾಹನದ ಹಿಂದೆ ಮುಂದೆ ಎಲ್ಲೂ ಕಾಣಸಿಗುವುದಿಲ್ಲ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ತಮ್ಮ ತ್ಯಾಗದಿಂದ ಬಿಜೆಪಿ ಅಧಿಕಾರಕ್ಕೆ ಬಂತು ಎಂದು ವಲಸಿಗ ಶಾಸಕರು ಪದೇ ಪದೇ ಹೇಳಿಕೆ ನೀಡುತ್ತಿದ್ದಾರೆ. ಮತ್ತೊಂದು ಕಡೆಯಲ್ಲಿ ಸಚಿವ ಸ್ಥಾನ ಕೈತಪ್ಪಿದ ಅತೃಪ್ತರು ಬಹಿರಂಗವಾಗಿ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ತ್ಯಾಗಕ್ಕೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ ಎಂಬ ಆರೋಪಗಳು ಬಿಜೆಪಿಯಲ್ಲಿ ಕೋಲಾಹಲ ಸೃಷ್ಟಿಸಿದೆ.

ಇಂತಹ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ನೀಡಿರುವ ಹೇಳಿಕೆ ಸಾಕಷ್ಟು ಕುತೂಹಲ ಕೆರಳಿಸಿದೆ. ಕಾರ್ಯಕರ್ತರ ತ್ಯಾಗವನ್ನು ಮುಂದಿಟ್ಟುಕೊಂಡು ಸಿ.ಟಿ ರವಿ ಅತೃಪ್ತರನ್ನು ಹಾಗೂ ವಲಸಿಗರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. (ಎಂ.ಎನ್)

 

Leave a Reply

comments

Related Articles

error: