ಸುದ್ದಿ ಸಂಕ್ಷಿಪ್ತ

ತರಬೇತಿ ಶಿಬಿರದ ಉದ್ಘಾಟನೆ : ಏ.17 ರಂದು

ಜೆ.ಎಸ್.ಎಸ್ ಕಾನೂನು ಕಾಲೇಜು, ಮೈಸೂರು ವಕೀಲರ ಸಂಘ ಮತ್ತು ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ  ವತಿಯಿಂದ  ‘ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಉಚಿತ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.

ಇದೇ ಏ.17ರಂದು ಸಂಜೆ 4.30ಕ್ಕೆ ಶಿಬಿರದ ಉದ್ಘಾಟನೆ ನಡೆಯಲಿದ್ದು,  ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ಪಿ.ಜಿ.ಎಂ.ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ.

ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸಿ.ಜಿ.ಬೆಟ್ಟಸೂರ್‍ಮಠ, ವಕೀಲರ ಸಂಘದ ಅಧ್ಯಕ್ಷ ಜಿ.ವಿ.ರಾಮಮೂರ್ತಿ, ಪ್ರಾಂಶುಪಾಲ ಪ್ರೊ.ಕೆ.ಎಸ್.ಸುರೇಶ್ , ಲಾಗೈಡ್ ಕನ್ನಡ ಕಾನೂನು ಮಾಸ ಪತ್ರಿಕೆ ಸಂಪಾದಕ ಹೆಚ್.ಎನ್.ವೆಂಕಟೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Leave a Reply

comments

Related Articles

error: