ಮೈಸೂರು

ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕೆ ಗುದ್ದಲಿಪೂಜೆ

ಮೈಸೂರಿನ ಎನ್.ಆರ್.ಮೊಹಲ್ಲಾದಲ್ಲಿರುವ ಕುರುಬರ ಶ್ರೀ ಭೀರೇಶ್ವರ ಶ್ರೀರಾಮ ಮಂದಿರ ಟ್ರಸ್ಟ್ ಇಲ್ಲಿ ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಸಮಾಜದ ವತಿಯಿಂದ ಸಮುದಾಯ ಭವನ ಕಟ್ಟಡ ನಿರ್ಮಾಣದ ಗುದ್ದಲಿಪೂಜೆಯನ್ನು ಭಾನುವಾರ ನೆರವೇರಿಸಲಾಯಿತು.

ಕರ್ನಾಟಕ  ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾನ ಇಲಾಖೆ ಸಮಾಜದ ವತಿಯಿಂದ 2.5ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯ ಭವನ ಕಟ್ಟಡದ ಗುದ್ದಲಿಪೂಜೆಯನ್ನು ಕೃಷ್ಣರಾಜ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಕೆ.ಸೋಮಶೇಖರ್ ನೆರವೇರಿಸಿದರು.

ಈ ಸಂದರ್ಭ ಮನಪಾ ಉಪಮೇಯರ್ ರತ್ನ ಲಕ್ಷ್ಮಣ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕೆ.ಮರಿಗೌಡ, ಟ್ರಸ್ಟ್ ನ ಗೌರವಾಧ್ಯಕ್ಷ ಕುನ್ನಯ್ಯ, ಅಧ್ಯಕ್ಷ ಎಂ.ಎನ್.ಮಹಾದೇವ್, ಕಾರ್ಯಾಧ್ಯಕ್ಷ ಚುಂಚಯ್ಯ, ಉಪಾಧ್ಯಕ್ಷ ಆರ್.ಮಹಾದೇವು ಸೇರಿದಂತೆ ಹಲವರು ಉಪಸ್ಥಿತರಿದ್ದರು.  ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಈ ಸಮುದಾಯ ಭವನ ನಿರ್ಮಾಣಕ್ಕೆ ಮೂವತ್ತು ಲಕ್ಷ ರೂಪಾಯಿಗಳ ಅನುದಾನವನ್ನು ನೀಡಿದೆ. ( ಎಸ್.ಎಚ್)

Leave a Reply

comments

Related Articles

error: