ಮೈಸೂರು

ದುಷ್ಕರ್ಮಿಗಳಿಂದ ಕೋತಿಗಳ ಮಾರಣ ಹೋಮ

ಯಾರೋ ದುಷ್ಕರ್ಮಿಗಳು  ಕೋತಿಗಳನ್ನು ಹಿಡಿದು ಸಾಯಿಸಿ ಹಳ್ಳಕ್ಕೆ ಬಿಸಾಡಿರುವ ಅಮಾನವೀಯ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ಮಂಡ್ಯಜಿಲ್ಲೆಯ ಪಾಂಡಪುರ ತಾಲ್ಲೂಕು ಪಟ್ಟಣಗೇರಿಯಲ್ಲಿ ಯಾರೋ ದುಷ್ಕರ್ಮಿಗಳು ಸುಮಾರು 35ಕ್ಕೂ ಹೆಚ್ಚು ಕೋತಿಗಳ ಮಾರಣ ಹೋಮ ನಡೆಸಿ ಹಳ್ಳಕ್ಕೆ ಬಿಸಾಡಿದ್ದಾರೆ.  ಇದನ್ನು ನೋಡಿದ ಗ್ರಾಮಸ್ಥರು ಮಮ್ಮಲ ಮರುಗಿದ್ದಾರೆ. ಬೆಳೆ ಹಾಳುಮಾಡುತ್ತವೆ ಎಂಬ ಕಾರಣಕ್ಕೆ ಆಸುಪಾಸಿನ ಗ್ರಾಮಸ್ಥರೇ ಈ ಕೃತ್ಯ ನಡೆಸಿರಬಹುದೆಂದು ಸ್ಥಳೀಯರು ಆರೋಪಿದ್ದಾರೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: