ಮೈಸೂರು

ಬೋರ್ ವೆಲ್ ಲಾರಿಗಳ ಮುಖಾಮುಖಿ ಡಿಕ್ಕಿ

ಬೋರ್ ವೆಲ್ ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಚಾಲಕ ಗಂಭೀರ  ಗಾಯಗೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಕಳಲೆ ಗೇಟ್ ಬಳಿ ಬೋರ್ ವೆಲ್ ಲಾರಿ ಸಾಗುತ್ತಿದ್ದ ವೇಲೆ ಇನ್ನೊಂದು ಬೋರ್ ವೆಲ್ ಲಾರಿಗೆ ಗುದ್ದಿದೆ. ಪರಿಣಾಮ ಲಾರಿಯಲ್ಲಿದ್ದ ತಮಿಳುನಾಡು ಮೂಲದ ಡ್ರೈವರ್ ಮತ್ತು ಕ್ಲಿನರ್ ಗೆ ತೀವ್ರ ಗಾಯಗಳಾಗಿದ್ದು, ಗಾಯಾಳುಗಳನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ  ದಾಖಲಿಸಲಾಗಿದೆ.
ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್-ಎಸ್.ಎಚ್).

Leave a Reply

comments

Related Articles

error: