ದೇಶಮೈಸೂರು

ಭಾರತೀಯ ಆಹಾರ ನಿಗಮದ ನೂತನ ಶಾಖೆ ಉದ್ಘಾಟನೆ

ಮೈಸೂರು, ಜ.18:- ಭಾರತೀಯ ಆಹಾರ ನಿಗಮದ ನೂತನ ವಿಭಾಗೀಯ ಕಚೇರಿಯನ್ನು ಮೈಸೂರಿನಲ್ಲಿ ಇತ್ತೀಚೆಗೆ ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣ ಸಚಿವರಾದ ಪಿಯೂಷ್ ಗೋಯಲ್ ಅವರು ವರ್ಚುವಲ್ ಮೂಲಕ ಅಧಿಕೃತವಾಗಿ ಉದ್ಘಾಟಿಸಿದರು.
ಮೈಸೂರಿನ ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ ವಿಭಾಗೀಯ ಕಚೇರಿಯು ಮಂಡ್ಯ, ಕೊಡಗು, ಚಾಮರಾಜನಗರ ಹಾಗೂ ತುಮಕೂರು ಜಿಲ್ಲೆಗಳ ಫಲಾನುಭವಿಗಳ ಆಹಾರ ಪೂರೈಕೆಯನ್ನು ಸಫಲವಾಗಿ ಸಾಗಿಸುವಲ್ಲಿ ಯಶಸ್ವಿಯಾಗಿದೆ.
ಈ ವಿಭಾಗವು 64250 ಮೆ.ಟನ್ ಸಾಮರ್ಥ್ಯದ 6 ಶೇಖರಣ ಗೋದಾಮು ಹಾಗೂ 80640 ಮೆ.ಟನ್ ಸಾಮರ್ಥ್ಯದ ರಾಜ್ಯ ಸರ್ಕಾರಿ ನೇಮಿತ 10 ಗೋದಾಮುಗಳಿದ್ದು, ಒಂದು ತಿಂಗಳಿಗೆ 36500 ಮೆ.ಟನ್ ಆಹಾರ ಪದಾರ್ಥಗಳನ್ನು ಹಂಚಿಕೆ ಮಾಡುತ್ತಾ ಬಂದಿದೆ.
ಕಾರ್ಯಕ್ರಮದಲ್ಲಿ ಸಿ.ಎ.ಎಫ್.ಪಿ.ಡಿ ಕಾಯದರ್ಶಿ ಸುದಾನ್ಷು ಪಾಂಡೆ, ಎಫ್.ಸಿ.ಐ. ಸಿಎಂಡಿ ಸಂಜೀವ್ ಕುಮಾರ್, ಎಫ್.ಸಿ.ಐ ಇಡಿ ಆರ್.ಡಿ.ನಜೀಮ್, ಜಿ.ನರಸಿಂಹರಾಜು, ಡಿ.ಜಿ.ಎಂ. ಮೋಹನ್ ಚಂದ್ರ, ನಾಗೇಶ್ ಕಮಲಾಕ್ಕರ್, ಲೋಕನಾಥಮ್, ರಮೇಶ್ ನಾಯಕ್ ಸೇರಿದಂತೆ ಇತರರು ಹಾಜರಿದ್ದರು.

Leave a Reply

comments

Related Articles

error: