ಮೈಸೂರು

ಬಾಲಗಂಗಾಧರನಾಥ ಸ್ವಾಮೀಜಿಯವರು ಎಲ್ಲಾ ಜನಾಂಗ ಹಾಗೂ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಿದ ಮಹಾನ್ ಸಾಧಕರು : ಹೆಚ್.ವಿ.ರಾಜೀವ್ ಬಣ್ಣನೆ

ಮೈಸೂರು,ಜ.18:- ಬಾಲಗಂಗಾಧರನಾಥ ಸ್ವಾಮೀಜಿಯವರು ಒಂದು ಜನಾಂಗಕ್ಕೆ, ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರದೇ ಎಲ್ಲಾ ಜನಾಂಗ ಹಾಗೂ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಿದ ಮಹಾನ್ ಸಾಧಕರಾಗಿದ್ದಾರೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಹೆಚ್ ವಿ ರಾಜೀವ್ ಬಣ್ಣಿಸಿದರು.
ಅವರಿಂದು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಭಕ್ತವೃಂದದ ವತಿಯಿಂದ ಕುವೆಂಪು ನಗರದಲ್ಲಿರುವ ಆದಿಚುಂಚನಗಿರಿ ರಸ್ತೆಯಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಗೌರವ ಸಮರ್ಪಿಸುವ ಮೂಲಕ 76 ನೇ ವರ್ಷದ ಜಯಂತಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಆಕಾಶಕ್ಕೆ ಆಕಾಶವೇ ಸರಿಸಮಾನ. ಅಂತೆಯೇ ಬಾಲಗಂಗಾಧರನಾಥ ಸ್ವಾಮೀಜಿ ಸಾಧನೆಯ ಹಾದಿ ಬಲು ದೊಡ್ಡದು. ಶ್ರೀಗಳು ಹಾಕಿಕೊಟ್ಟ ದಾರಿಯಂತೆ ಅವರ ಆದರ್ಶಗಳನ್ನು ಪಾಲಿಸಿಕೊಂಡು ಹೋಗುತ್ತಿರುವ ನಿರ್ಮಲಾನಂದನಾಥ ಸ್ವಾಮೀಜಿಯೂ ಅವರ ಸಾಲಿನಲ್ಲಿ ನಿಲ್ಲುತ್ತಾರೆ. ಶ್ರೀಗಳು ಒಂದು ಜನಾಂಗಕ್ಕೆ, ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರದೇ ಎಲ್ಲಾ ಜನಾಂಗ ಹಾಗೂ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಿದ ಮಹಾನ್ ಸಾಧಕರಾಗಿದ್ದಾರೆ’ ಎಂದರು.
ವಿಜಯನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ಬಾಲಕೃಷ್ಣ ಮಾತನಾಡಿ ಕಾಲಾತೀತ ಸಾಧಕರು ಬಾಲಗಂಗಾಧರನಾಥ ಶ್ರೀಗಳು ಕರ್ನಾಟಕಕಂಡ ಅವತಾರ ಪುರುಷರಲೊಬ್ಬರು. ಆದಿ ಚುಂಚನಗಿರಿ ಕ್ಷೇತ್ರ ಶ್ರೀ ಗಳ ಪ್ರವೇಶ ದಿಂದ ಪವಾಡವೆಂಬಂತೆ ಇಡೀ ದೇಶದ ಜನರ ಗಮನ ಸೆಳೆದಿದೆ. ಚುಂಚನಗಿರಿಯನ್ನು ಚಿನ್ನದಗಿರಿ ಎಂಬಂತೆ ಮರು ಸೃಷ್ಠಿ ಸಿದ್ದಾರೆ. ಶ್ರೀ ಗಳು ಧಾರ್ಮಿಕ ದೃಷ್ಟಿಯಲ್ಲಿ ಜಗದ್ಗುರುಗಳು ಎನಿಸಿಕೊಂಡಿದ್ದರು. ಅವರು ಸೇವೆಯೇ ಪೂಜೆ ಎಂದು ಭಾವಿಸಿದ ಜನಮುಖ ಚಿಂತಕರಾಗಿದ್ದರು. ಮಠಗಳು ಇರುವುದು ಗುರುಗಳಿಗಲ್ಲಾ .ಜನರಿಗೆ ಎಂಬುವುದು ಅವರ ಆದರ್ಶವಾಗಿತ್ತು. ಈ ಜನರಲ್ಲಿ ಶೋಷಿತರು, ದಲಿತರು, ಅನಕ್ಷರಸ್ಥರು, ರೈತರು ಮುಂತಾದ ನಿರ್ಲಕ್ಷಿತರ ಬಗ್ಗೆ ಸ್ಪಂದಿಸುವ ಹಂಬಲವುಳ್ಳವರಾಗಿದ್ದರು ಎಂದರು.
ಹಿರಿಯ ಸಮಾಜ ಸೇವಕ ಡಾ. ಕೆ ರಘುರಾಂ ವಾಜಪೇಯಿ ಮಾತನಾಡಿ ಬಾಲಗಂಗಾಧರನಾಥ ಶ್ರೀ ಗಳು ಮಹಾಕನಸುಗಾರರಾಗಿದ್ದರು. 1974 ರಲ್ಲಿ ಶ್ರೀ ಕ್ಷೇತ್ರದ 71ನೇ ಪೀಠಾಧ್ಯಕ್ಷರಾಗಿ ಸಮಾಜಕ್ಕೆ ಅರ್ಪಿಸಿಕೊಂಡರು. ಕೇವಲ ಶಿಶುವಿಹಾರ.ಪ್ರಾಥಮಿಕ ಶಿಕ್ಷಣದ ಶಾಲೆಗೆ ಸೀಮಿತಗೊಂಡಿದ್ದ ಶ್ರೀ ಕ್ಷೇತ್ರದ ಶಿಕ್ಷಣಾಕ್ಷೇತ್ರವನ್ನು ಪ್ರೌಢಶಾಲೆಗಳು, ಕಾಲೇಜು, ಅನಾಥಾಲಯಗಳು,ವಸತಿ ಶಿಕ್ಷಣಾ ಸಂಸ್ಥೆ, ಇಂಜಿನಿಯರಿಂಗ್, ವೈದ್ಯಕೀಯ, ಜಾಗತೀಕ ಗುಣಮಟ್ಟದ ಬಿಜಿಎಸ್ ಆಸ್ಪತ್ರೆಗಳು, ಇತ್ತೀಚೆಗೆ ಬಿಜಿಎಸ್ ವಿಶ್ವವಿದ್ಯಾಲಯಗಳನ್ನು ರೂಪಿಸಿದ ಹೆಗ್ಗಳಿಕೆ ಶ್ರೀ ಗಳದ್ದು. ಒಬ್ಬ ವ್ಯಕ್ತಿಯ ಜೀವಿತಾವಧಿ ಕಾಲದಲ್ಲಿ ಇದೆಲ್ಲಾ ಸಾಧ್ಯವೇ ಎಂದು ಆಶ್ಚರ್ಯ ಪಡುವವರಿಗೆ ಸಾಧಿಸಿ ತೋರಿಸಿದವರು ಎಂದರು.
ಕಾರ್ಯಕ್ರಮದಲ್ಲಿ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ ,ಒಕ್ಕಲಿಗರ ಸಂಘದ ಅಧ್ಯಕ್ಷರಾದ ಮಂಜುಗೌಡ , ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಲಕ್ಷ್ಮೀದೇವಿ, ಬಾಲಗಂಗಾಧರನಾಥ ಸ್ವಾಮಿ
ಭಕ್ತವೃಂದ ಸಂಚಾಲಕರುಗಳಾದ ಕುಮಾರ್ ಗೌಡ ,ವಿನಯ್ ಬಾಬು ,ಚರಣ್ ರಾಜ್ ,ಬೆಟ್ಟೇಗೌಡ , ಆನಂದ ,ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್ , ಜಿ ಎಂ ಪಂಚಾಕ್ಷರಿ ,ದೇವರಾಜ್, ಸುಚೇಂದ್ರ ,ಸಂತೋಷ್ ಗೌಡ,ರವೀಂದ್ರ , ಮೋಹನ್ ಕುಮಾರ್ ಗೌಡ ,ವಿನಯ್ ಕಣಗಾಲ್ ,ಗೋಪಾಲ್ ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: