ಮೈಸೂರು

ಸುಯೋಗ್ ಆಸ್ಪತ್ರೆಯಲ್ಲಿ ಜ.25ರಿಂದ 30ರವರೆಗೆ ಉಚಿತ ಹೃದ್ರೋಗ,ಆ್ಯಂಜಿಯೋಗ್ರಾಂ,ಆ್ಯಂಜಿಯೋಪ್ಲಾಸ್ಟಿ ತಪಾಸಣಾ ಶಿಬಿರ

ಮೈಸೂರು,ಜ.18:- ಸುಯೋಗ ಆಸ್ಪತ್ರೆಯ ವತಿಯಿಂದ ಉಚಿತ ಹೃದ್ರೋಗ ಮತ್ತು ಆ್ಯಂಜಿಯೋಗ್ರಾಂ ಮತ್ತು ಆ್ಯಂಜಿಯೋಪ್ಲಾಸ್ಟಿ ತಪಾಸಣಾ ಶಿಬಿರವನ್ನು ಜ.25ರಿಂದ 30ರವರೆಗೆ ಬೆಳಿಗ್ಗೆ 10ಗಂಟೆಯಿಂದ ಮಧ್ಯಾಹ್ನ 2ಗಂಟೆಯವರೆಗೆ ಸುಯೋಗ್ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದೆ.
ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಸುಯೋಗ್ ಆಸ್ಪತ್ರೆಯ ಅಧ್ಯಕ್ಷ ಡಾ.ಎಸ್.ಪಿ ಯೋಗಣ್ಣ ಮಾಹಿತಿ ನೀಡಿ ಪ್ರತಿನಿತ್ಯ 60ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗುವುದು. ಆಸಕ್ತರು ತಮ್ಮ ಹೆಸರುಗಳನ್ನು 25ರೊಳಗೆ ದೂ.ಸಂಖ್ಯೆ 0821-2566966 ಹಾಗೂ 9739555908ರಲ್ಲಿ ನೋಂದಾಯಿಸಿಕೊಳ್ಳಬೇಕು. ನೋಂದಾಯಿಸಿಕೊಂಡ ಎಲ್ಲರಿಗೂ ಉಚಿತ ಸಲಹೆ ನೀಡಲಾಗುವುದು. ಅವಶ್ಯವಿರುವವರಿಗೆ ಆ್ಯಂಜಿಯೋಗ್ರಾಂ ಮತ್ತು ಆ್ಯಂಜಿಯೋಪ್ಲಾಸ್ಟಿ ಗಳನ್ನು ಉಚಿತವಾಗಿ ಮಾಡಲಾಗುವುದು ಎಂದರು.
ಸುಯೋಗ್ ಆಸ್ಪತ್ರೆಯ ಹೃದ್ರೋಗ ತಜ್ಞರಾದ ಡಾ.ಆದಿತ್ಯ ಉಡುಪ ಅವರ ನೇತೃತ್ವದಲ್ಲಿ ಮೂರು ಮಂದಿಯ ವೈದ್ಯರ ತಂಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ತಪಾಸಣಾ ಶಿಬಿರದ ಉದ್ಘಾಟನೆಯನ್ನು ಜ.25ರಂದು ಬೆಳಿಗ್ಗೆ 10.30ಕ್ಕೆ ಸಹಕಾರಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನೆರವೇರಿಸಲಿದ್ದು, ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್ ಭಾಗವಹಿಸಲಿದ್ದಾರೆ. ಸಾರ್ವಜನಿಕರು ಈ ಶಿಬಿರದ ಸದುಪಯೋಗವನ್ನು ಪಡೆಯಿರಿ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: