ಮೈಸೂರು

ವೃದ್ಧಾಶ್ರಮದ ವೃದ್ಧರಿಗೆ ಹಣ್ಣು-ಹಂಪಲು ವಿತರಣೆ

ಮೈಸೂರಿನ  ಜನರಿಂದ ಜನರಿಗಾಗಿ ಸಂಸ್ಥೆಯ ವತಿಯಿಂದ ಭಾನುವಾರ ಸಾವಿರ ವಾರದ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಇಲ್ಲಿನ ಜೆ.ಪಿ.ನಗರದಲ್ಲಿರುವ ಪೇಜಾವರಶ್ರೀ ವೃದ್ಧಾಶ್ರಮದ ವೃದ್ಧರಿಗೆ ಹಣ್ಣು ಹಂಪಲು ಹಾಗೂ ಉಪಹಾರಗಳನ್ನು ವಿತರಿಸಲಾಯಿತು.

 ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂಸ್ಥೆಯ ಮುಖ್ಯಸ್ಥ  ಎನ್.  ವಿಠ್ಠಲ್ ಮಾತನಾಡಿ ಪ್ರತಿ ಭಾನುವಾರದಂದು ವಿವಿಧ ಸೇವಾ ಆಶ್ರಮಗಳಿಗೆ ಭೇಟಿ ನೀಡಿ ಹಣ್ಣು ಹಂಪಲು ವಿತರಿಸುತ್ತಾ ಬಂದಿದ್ದೇವೆ. ಈ ಭಾನುವಾರದಂದು ಆ ಸೇವೆ ಸಾವಿರ ದಿನ ಪೂರೈಸಿದೆ. ವೃದ್ಧರಿಗೆ ಅವಶ್ಯಕವಾಗುವಂತೆ ವಸ್ತುಗಳನ್ನು ವಿತರಿಸಲಾಗಿದೆ. ಈ ಸಂಸ್ಥೆಗಳಿಗೆ ಯಾವುದೇ ಪದಾಧಿಕಾರಿಗಳು ಇಲ್ಲದ ಕಾರಣ ಯಾರೂ ಬೇಕಾದರೂ ಸಹಾಯ ಮಾಡಬಹುದು ಎಂದರು.

ತಮ್ಮ ಕುಟುಂಬಿಕರಿಂದ ದೂರ ಇರುವ ವೃದ್ಧರು ಈ ಸಂದರ್ಭ ಸಂಭ್ರಮಪಟ್ಟರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: