ಕರ್ನಾಟಕಪ್ರಮುಖ ಸುದ್ದಿ

ಹಣ ದೋಚಿ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಹನೂರು ಪೊಲೀಸರು ಯಶಸ್ವಿ

ರಾಜ್ಯ(ಚಾಮರಾಜನಗರ)ಜ.19:- ಕಾರಿನಲ್ಲಿ ಬಂದು ಡಿಕ್ಕಿ ಹೂಡೆದು ಹಲ್ಲೆ ಮಾಡಿ ಹಣದೋಚಿ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಹನೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಹನೂರು ತಾಲ್ಲೂಕಿನ ಚಿಂಚಳ್ಳಿ ಗ್ರಾಮದ ಮಲ್ಲೇಶ್, ಕೋಲಾರ ಜಿಲ್ಲೆಯ ಮಾಲೂರಿನ ಮಂಜು, ಮನು ಮತ್ತು ರಿತೇಶ್ ಬಂದಿತ ಆರೋಪಿಗಳಾಗಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನಿಬ್ಬರು ಆರೋಪಿಗಳಾದ ಬೈರನಾಥ ಗ್ರಾಮದ ಶೇಖರ್, ಹಾಗೂ ಮಹೇಂದ್ರ ಎಂಬುವವರು ಪರಾರಿಯಾಗಿದ್ದು ಇವರ ಪತ್ತೆಗೆ ಪೋಲಿಸರು ಬಲೆ ಬೀಸಿದ್ದಾರೆ.

ಘಟನೆ ವಿವರ
ಜನವರಿ 10 ರಂದು ಹನೂರು ತಾಲೂಕಿನ ಹನೂರು – ಅಜ್ಜಿಪುರ ನಡುವಿನ ಪಾರೆಸ್ಟ್ ನರ್ಸರಿ ಬಳಿ ಸನ್‌ಪ್ಯೂರ್ ಆಯಿಲ್ ಏಜೆನ್ಸಿಯ ಮಾಲೀಕರಾದ ಶ್ರೀನಿವಾಸ್ ಅವರ ಪುತ್ರ ನಿತಿನ್ ತಾವು ಸರಬರಾಜು ಮಾಡಿದ್ದ ಸನಪ್ಯೂರ್ ಎಣ್ಣೆಯ ಹಣವನ್ನು ಸಂಗ್ರಹಿಸಿಕೂಂಡು ಬರುತ್ತಿದ್ದಾಗ ಪಟ್ಟಣದ ಹೂರವಲಯದ ನರ್ಸರಿಯ ಬಳಿ ಅಪರಿಚಿತ ಟಾಟಾ ಇಂಡಿಕಾ ಕಾರ್ ಡಿಕ್ಕಿ ಹೊಡೆದು, ಅಲ್ಲಿದ್ದ ವ್ಯಕ್ತಿಗಳು ನಿತಿನ್ ಬಳಿ ಇದ್ದ ಅಂದಾಜು 2ಲಕ್ಷ ಹಣದ ಬ್ಯಾಗ್ ಕಿತ್ತುಕೂಂಡು ಪರಾರಿಯಾಗಿದ್ದರು ಸಂಬಂಧ ಹನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಹನೂರು ಪೋಲಿಸರು ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ದಿವ್ಯಸಾರಥಾಮಸ್‌ರವರ ಮಾರ್ಗದರ್ಶನದಲ್ಲಿ ಹಾಗೂ ಡಿವೈಸ್ಪಿ ನಾಗರಾಜ್, ಹನೂರು ಪೊಲೀಸ್ ಠಾಣೆಯ ಪ್ರಭಾರ ಇನ್ಸ್ಪೆಕ್ಟರ್ ನಂಜುಂಡಸ್ವಾಮಿ ಪಿ.ಎಸ್.ಐ ನಾಗೇಶ್ ರಾಮಾಪುರ, ಪಿ.ಎಸ್.ಐ. ಮಂಜುನಾಥ್ ಪ್ರಸಾದ್ ನೇತ್ರತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ ಮುಂದಿನ ಕ್ರಮಕೈಗೂಂಡಿದ್ದಾರೆ ಅಲ್ಲದೆ ಈ ಕೃತ್ಯಕ್ಕೆ ಬಳಸಲಾಗಿದ್ದ 3 ಬೈಕ್ ಹಾಗೂ 1 ಕಾರುನ್ನು ಸಹ ವಶಪಡಿಸಿಕೂಳ್ಳಲಾಗಿದೆ.

ಈ ದಾಳಿಯಲ್ಲಿ ಎ.ಎಸ್.ಐ ರಾಜಶೇಖರ್, ಮುಖ್ಯ ಪೇದೆ ಜಮೀಲ್, ಪೇದೆಗಳಾದ ಲಿಯಾಖತ್ ಅಲಿ ಖಾನ್ ಕಾಮರಾಜ್, ಚಂದ್ರು ಶಿವಕುಮಾರ್, ರಾಜು, ಲಿಂಗರಾಜು ನಾಗೇಂದ್ರ, ರಂಗಸ್ವಾಮಿ, ಚಾಲಕ ಪರಮೇಶ್ ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: