ಕರ್ನಾಟಕಪ್ರಮುಖ ಸುದ್ದಿ

ಹಾವೇರಿ: ಶರಣ ಬಸವೇಶ್ವರ ಮಠದ ಪ್ರಣವಾನಂದ ಸ್ವಾಮೀಜಿಗೆ ಕೊಲೆ ಬೆದರಿಕೆ

ಹಾವೇರಿ,ಜ.19-ರಾಣೆಬೆನ್ನೂರು ತಾಲ್ಲೂಕಿನ ಆರೇಮಲ್ಲಾಪುರ ಗ್ರಾಮದ ಶರಣ ಬಸವೇಶ್ವರ ಮಠದ ಪ್ರಣವಾನಂದ ಸ್ವಾಮೀಜಿಗೆ ಕೊಲೆ ಬೆದರಿಕೆ ಬಂದಿದೆ.

ಸ್ವಾಮೀಜಿ ಅವರಿಗೆ ಕೊಲೆ ಬೆದರಿಕೆ ಪತ್ರ ಬಂದಿದ್ದು, `ನೀ ಪಂಚಾಯತ್ ಸದಸ್ಯ ಆಗೀನಿ ಅಂತ ಮೆರೆಯಬೇಡ. ನಾವು ಯಾಕೆ ಸುಮ್ಮನಿದ್ದೇವಿ ಗೊತ್ತಾ… ನಿಮ್ಮನ್ನು ಯಾವಾಗ್ಲೋ ಊರು ಬಿಟ್ಟು ಕಳಿಸ್ತಿದ್ವಿ, ನೀವು ಆ ಒಬ್ಬ ವ್ಯಕ್ತಿಯಿಂದ ಬಚಾವ್ ಆಗ್ತಿದ್ದೀರಿ. ನಮಗೆ ಕೊಲೆ ಮಾಡುವುದು ದೊಡ್ಡ ಕೆಲಸ ಅಲ್ಲ. ಟಿಪ್ಪರ್, ಲಾರಿ ತಂದು ಡಿಕ್ಕಿ ಹೊಡೆಸಿದ್ರೆ ಸಾಕು, ನೀವು ಇಲ್ಲದಂತೆ ಮಾಡಬಹುದು’ ಎಂದು ಪತ್ರದಲ್ಲಿ ಬರೆಯಲಾಗಿದೆ.

ಕೊಲೆ ಬೆದರಿಕೆ ಪತ್ರ ಬಂದ ಬಳಿಕ ಸ್ವಾಮೀಜಿ ಅವರು ಸೂಕ್ತ ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದ್ದಾರೆ. ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅವರು ಗೆಲುವು ಸಾಧಿಸಿದ್ದರು. (ಎಂ.ಎನ್)

Leave a Reply

comments

Related Articles

error: