ಮೈಸೂರು

ತೊಳಸಿ ಜ್ಯುವೆಲ್ಲರ್ಸ್ ನೂತನ ಶಾಖೆ ಉದ್ಘಾಟನೆ

ಮೈಸೂರಿನ  ಪ್ರಮುಖ ಜ್ಯುವೆಲ್ಲರಿಗಳಲ್ಲಿ ಒಂದಾದ ತೊಳಸಿ ಜ್ಯುವೆಲರ್ಸ್‍ನ ನೂತನ ಶಾಖೆ ಒಂಟಿಕೊಪ್ಪಲಿನ ವಿವಿ ಮೊಹಲ್ಲಾದಲ್ಲಿ ಭಾನುವಾರ ಆರಂಭಗೊಂಡಿತು.
ನೂತನ ಶಾಖೆಗೆ ಶಾಸಕ ವಾಸು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ಮೈಸೂರಿನ ಚಿನ್ನಪ್ರಿಯರ ಅವಶ್ಯಕತೆಗಳನ್ನು ಪೂರೈಸುತ್ತಿರುವ ತೊಳಸಿ ಜ್ಯುವೆಲ್ಲರ್ಸ್ ಇದೀಗ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದು ನೂತನ ಶಾಖೆಯನ್ನು ಆರಂಭಿಸಿದೆ. ಶುದ್ಧತೆಗೆ ಮೊದಲ ಆದ್ಯತೆ ನೀಡುತ್ತಾ ಗ್ರಾಹಕ ಸ್ನೇಹಿ ಜ್ಯುವೆಲ್ಲರಿಯಾಗಿ ಮೈಸೂರಿನಾದ್ಯಂತ ಹೆಸರುವಾಸಿಯಾಗಿದೆ. ಇನ್ನಷ್ಟು ಬೆಳವಣಿಗೆಯಾಗಿ ಹೆಸರುವಾಸಿಯಾಗಲಿ ಎಂದು ಶುಭ ಹಾರೈಸಿದರು.
ಬಳಿಕ ಮಾತನಾಡಿದ ತೊಳಸಿ ಜ್ಯುವೆಲ್ಲರ್ಸ್‍ನ ಹರ್ಷ, ಮೈಸೂರು ಬೆಂಗಳೂರಿನಂತೆ ವಿಸ್ತಾರವಾಗಿ ಬೆಳೆಯುತ್ತಿದೆ. ದಿನದಿಂದ ದಿನಕ್ಕೆ ನಗರ ಸಂಚಾರ ದಟ್ಟಣೆ ಅಧಿಕವಾಗುತ್ತಿದ್ದು, ನಗರದ ಹೃದಯ ಭಾಗಕ್ಕೆ ತೆರಳುವುದು ತ್ರಾಸದಾಯಕವಾಗುತ್ತಿದೆ. ಈ ಭಾಗದ ಗ್ರಾಹಕರು ಚಿನ್ನ ಖರೀದಿ ಮಾಡಬೇಕಾದರೆ ನಗರದೊಳಗೆ ತೆರಳಬೇಕಿತ್ತು. ಹಾಗಾಗಿ ಗ್ರಾಹಕರ ಅವಶ್ಯಕತೆ ಪೂರೈಸುವ ಸಲುವಾಗಿ ಈ ಭಾಗದಲ್ಲೇ ಶಾಖೆಯನ್ನು ಆರಂಭಿಸಿದ್ದೇವೆ. ಇದರಿಂದ ಗ್ರಾಹಕರು ನಗರದೊಳಗೆ ತೆರಳುವುದು ತಪ್ಪುತ್ತದೆ. ತೊಳಸಿ ಜ್ಯುವೆಲ್ಲರ್ಸ್ ಗುಣಮಟ್ಟದ ಹಾಗೂ ಶುದ್ಧ ಚಿನ್ನಕ್ಕೆ ಹೆಸರುವಾಸಿಯಾಗಿದ್ದು, ನೂತನ ಡಿಸೈನ್ಸ್ ಗಳನ್ನು  ನೀಡುತ್ತಿದೆ. ಅಲ್ಲದೆ ವಜ್ರದ ಆಭರಣಗಳೂ ಲಭ್ಯವಿದೆ. ಅಕ್ಷಯ ತೃತೀಯದ ಅಂಗವಾಗಿ ವಿಶೇಷ ಕೊಡುಗೆ ನೀಡುತ್ತಿದ್ದು ಗ್ರಾಹಕರು ಇದರ ಸದುಪಯೋಗಪಡೆದುಕೊಳ್ಳಬಹುದು ಎಂದು ಹೇಳಿದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: