ಮೈಸೂರು

ಹ್ಯೂಮನ್ ರೈಟ್ಸ್, ಮೀಡಿಯಾ ಹೆಸರೇಳಿ ನ್ಯೂರೋ ಸರ್ಜನ್ ಗೆ ಹಣಕ್ಕೆ ಬೇಡಿಕೆ : ದೂರು

ಮೈಸೂರು,ಜ.19:- ಹ್ಯೂಮನ್ ರೈಟ್ಸ್, ಮೀಡಿಯಾ ಒಂದರ ಹೆಸರೇಳಿಕೊಂಡು ಕೆ.ಆರ್.ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡಿರುವ ನ್ಯೂರೋ ಸರ್ಜನ್ ಓರ್ವರ ಬಳಿ ಓರ್ವ ರೋಗಿಯ ಕುರಿತು ವಿಚಾರಿಸಿ ಬಳಿಕ ಮೀಡಿಯಾದಲ್ಲಿ ನಿಮ್ಮ ಪ್ರಕಟಿಸುವುದಾಗಿ ಬೆದರಿಸಿ ಐದು ಲಕ್ಷರೂಹಣಕ್ಕೆ ಬೇಡಿಕೆ ಇಟ್ಟ ಘಟನೆ ಬೆಳಕಿಗೆ ಬಂದಿದೆ.
ನಿನ್ನೆ ಮಧ್ಯಾಹ್ನ 3ಗಂಟೆಯ ಸುಮಾರಿಗೆ ಕೆ.ಆರ್.ಆಸ್ಪತ್ರೆಯ ನ್ಯೂರೋ ಸರ್ಜನ್ ಓರ್ವರಿಗೆ ಕರೆ ಮಾಡಿದ ತಂಡ ಓರ್ವ ರೋಗಿಯ ಕುರಿತು ಮಾತನಾಡಬೇಕು ಬನ್ನಿ ಎಂದು ಕರೆದಿದ್ದು ಅವರು ಕೆಲಸ ಮುಗಿದ ನಂತರ 4.34ರ ಸುಮಾರಿಗೆ ಕರೆ ಮಾಡಿ ಸೌತ್ ತಿಂಡೀಸ್ ಹೋಟೆಲ್ ಗೆ ಬರುವಂತೆ ತಿಳಿಸಿದ್ದರು. ಅಲ್ಲಿಗೆ ನ್ಯೂರೋ ಸರ್ಜನ್ ಹೋಗಿದ್ದು ನಾವು ಹ್ಯೂಮನ್ ರೈಟ್ಸ್ ಕಮೀಷನ್ ನಿಂದ ಮತ್ತು ನಾವು ಸುವರ್ಣ ಕಾವೇರಿ ಎಕ್ಸಪ್ರೆಸ್ ಮೀಡಿಯಾದಲ್ಲಿ ಕೆಲಸ ಮಾಡಿಕೊಂಡಿದ್ದೇವೆಂದು ಐಡಿ ಕಾರ್ಡ್ ನ್ನು ತೋರಿಸಿ ತಾವು ಚಿಕಿತ್ಸೆ ನೀಡುತ್ತಿರುವ ರೋಗಿಗಳ ಹತ್ತಿರ ಹಣ ವಸೂಲಿ ಮಾಡುತ್ತಿದ್ದೀರಿ, ಅದರ ಬಗ್ಗೆ ನಮ್ಮ ಬಳಿ ವಿಡಿಯೋ ಕ್ಲಿಪ್ಪಿಂಗ್ ಹಾಗೂ ರೋಗಿಗಳು ನೀಡಿರುವ ದೂರಿನ ಪ್ರತಿಗಳಿವೆ ಅವುಗಳನ್ನು ಮೀಡಿಯಾದಲ್ಲಿ ಪ್ರಸಾರ ಮಾಡುತ್ತೇವೆ ಇದರಿಂದ ನಿಮ್ಮ ಹೆಸರು ಹಾಳಾಗುತ್ತದೆ ಎಂದು ಹೆದರಿಸಿ ಪ್ರಸಾರ ಮಾಡದೇ ಇರಲು 5ಲಕ್ಷರೂ.ಗಳನ್ನು ನೀಡುವಂತೆ ಬೇಡಿಕೆ ಇಟ್ಟಿದ್ದು ಮಾತುಕತೆ ನಡೆಸಿ ಅವರ ಬಾಸ್ ಮಾತನಾಡುತ್ತಾರೆಂದು ಫೋನ್ ಕೊಟ್ಟು ಫೋನಿನಲ್ಲಿ ಮಾತನಾಡಿ 2ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದರು. ತಮ್ಮ ಬಳಿ ಹಣ ಇಲ್ಲ 50ಸಾವಿರ ಕೊಡುತ್ತೇನೆಂದು ಹೇಳಿದ್ದೆ, ನಂತರ ಮಾತುಕತೆ ಮಾಡಿಕೊಂಡು 1ಲಕ್ಷ 75ಸಾವಿರ ರೂ.ಕೊಡುವುದಾಗಿ ಹೇಳಿದ್ದು ಹಣವನ್ನು ತಕ್ಷಣವೇ ನೀಡುವಂತೆ ಒತ್ತಾಯಿಸುತ್ತಿದ್ದರು. ಕುವೆಂಪುನಗರದ ನಳಪಾಡ್ ಹೋಟೆಲ್ ಗೆ ಸಾಯಂಕಾಲ 6.30ರ ಸುಮಾರಿಗೆ ಬರುವಂತೆ ತಿಳಿಸಿದ್ದರು. ನಂತರ ಅನೇಕ ಬಾರಿ ಕರೆ ಮಾಡಿದ್ದರು. ಸಂಜೆ 7.27ರಸುಮಾರಿಗೆ ಸಂಜೀವಿನಿ ಆಸ್ಪತ್ರೆಯ ನರ್ಸ್ ಕರೆ ಮಾಡಿ ಮೀಡಿಯಾದವರು ಬಂದು ತೊಂದರೆ ಕೊಡುತ್ತಿದ್ದಾರೆ ಬೇಗ ಬನ್ನಿ ಎಂದಿದ್ದು ಸಂಜೀವಿನಿ ಆಸ್ಪತ್ರೆ ಬಳಿ ಬಂದಾಗ ಸುಮಾರು 15-20ಮಂದಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ಹೆದರಿಸಿ ಗಲಾಟೆ ಮಾಡುತ್ತಿದ್ದರು. ಮೀಡಿಯಾ ಹೆಸರಲ್ಲಿ ಹಣಕ್ಕೆ ಬೇಡಿಕೆ ಇಟ್ಟವರು ಅಮ್ರೀನ್ ಸಾನಿಯಾ, ಶಹಿದಾ, ಆಯುಷಾ ಬಾಯಿ ಎಂದು ತಿಳಿದು ಬಂದಿದೆ. ಇವರೆಲ್ಲ ಸುವರ್ಣ ಕಾವೇರಿ ಎಕ್ಸಪ್ರೆಸ್ ಮೀಡಿಯಾ ಹೆಸರಿನಲ್ಲಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಕರ್ನಾಟಕ ಮೀಡಿಯಾ ಎಕ್ಸಪ್ರೆಸ್ ಮತ್ತು ಮಾನವ ಹಕ್ಕುಗಳ ಹಾಗೂ ಆ್ಯಂಟಿ ಕರೆಪ್ಷನ್ ಕಮಿಟಿ ಹೆಸರಿನಲ್ಲಿ ಸುಲಿಗೆ ಮಾಡಲು ಬೆದರಿಸಿದ್ದಾರೆ. ಇವರ ಮೇಲೆ ಕ್ರಮ ಜರುಗಿಸುವಂತೆ ನ್ಯೂರೋ ಸರ್ಜನ್ ಮಂಡಿ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: