ಮೈಸೂರು

ದೇವಸ್ಥಾನದ ಕಳಸಾ ಪ್ರತಿಷ್ಠಾಪನೆ

ಮೈಸೂರು,ಜ.19:- ದೊಡ್ಡಮ್ಮತಾಯಿ ಮೂಲ ಸನ್ನಿಧಿ,ತೊಣಚಿಕೊಪ್ಪಲು ಶ್ರೀ ಬೀರೇಶ್ವರ ಸ್ವಾಮಿ ಟ್ರಸ್ಟ್ (ರಿ) ತೊಣಚಿಕೊಪ್ಪಲು ಇವರ ಆಶ್ರಯದಲ್ಲಿ ನೂತನವಾಗಿ ನಿರ್ಮಿಸಿರುವ ದೇವಸ್ಥಾನದ ಕಳಸಾ ಪ್ರತಿಷ್ಠಾಪನೆ ಹಾಗೂ ಉದ್ಘಾಟನಾ ಸಮಾರಂಭ ಯಶಸ್ವಿಯಾಗಿ ಜರುಗಿತು.
ಕೆಆರ್ ನಗರ ಶಾಖಾ ಮಠದ ಶಿವಾನಂದಪುರಿ ಸ್ವಾಮೀಜಿ ಹಾಗೂ ಆದಿಚುಂಚನಗಿರಿ ಶಾಖಾ ಮಠದ ಸೋಮನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ 15ಲಕ್ಷ ಅನುದಾನ ಬಿಡುಗಡೆ ಮಾಡಿದ್ದ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ,ಪಾಲಿಕೆ ಸದಸ್ಯರಾದ ಜೆ ಗೋಪಿ,ಯಜಮಾನ್ ಜವರಪ್ಪ ,ಮಾಜಿ ಮಹಾಪೌರರುಗಳಾದ ಪುಷ್ಪಲತಾ ಚಿಕ್ಕಣ್ಣ,ಚಿಕ್ಕಣ್ಣ,ಎಂಡಿಸಿಸಿ ಬ್ಯಾಂಕ್ ನಿರ್ದೇಶಕಿಯವರಾದ ಮೋಹನಕುಮಾರಿ,ಶಿವಬೀರಪ್ಪ,ಹರೀಶ್ ಮೊಗಣ್ಣ ಹಾಗೂ ಮೈಸೂರು ಸುತ್ತಮುತ್ತ ಹಳ್ಳಿಯ ಗಡಿ ಯಜಮಾನರುಗಳು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: