ಮೈಸೂರು

ಬಸವೇಶ್ವರ ಜಯಂತ್ಯೋತ್ಸವದಲ್ಲಿ ಗಮನ ಸೆಳೆದ ದೇಶಿ ಆಟ

ಮೈಸೂರು ವೀರಶೈವ ಸಜ್ಜನ ಸಂಘದಿಂದ ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮೈಸೂರಿನ ಕಂಠಿಮಲ್ಲಣ್ಣನವರ ಕಲ್ಯಾಣ ಮಂದಿರದಲ್ಲಿ  ವೀರಶೈವ ಸಮಾಜದವರಿಗಾಗಿ  ದೇಶಿ ಆಟಗಳಾದ ಚದುರಂಗ, ಪಗಡೆ, ಚೌಕಾಬಾರ ಸೇರಿದಂತೆ ನಾನಾವಿಧದ ಆಟಗಳಲ್ಲಿ ವೃದ್ಧರು, ಯುವತಿಯರು, ಮಕ್ಕಳು ಎಂದು ಭೇದವೆಣಿಸದೇ ಎಲ್ಲರೂ ತೊಡಗಿಸಿಕೊಂಡಿದ್ದರು. ಅಷ್ಟೇ ಅಲ್ಲದೇ  ಚಿತ್ರ ರಚನೆ , ವಚನ ಗಾಯನ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ  ಸಂಘದ ಅಧ್ಯಕ್ಷ ಎಂ.ಎನ್. ಜೈಪ್ರಕಾಶ್ ಮಾತನಾಡಿ ದೇಶಿ ಕ್ರೀಡೆಗಳ ಬಗ್ಗೆ ಮಾಹಿತಿ ನೀಡಿದರು. ಎಲ್ಲರೂ ಆಟದಲ್ಲಿ ಅತ್ಯಂತ ಉತ್ಸುಕರಾಗಿ ಆಡುತ್ತಿರುವುದು ಕಂಡು ಬಂತು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: