ಕ್ರೀಡೆದೇಶಪ್ರಮುಖ ಸುದ್ದಿ

IND vs AUS: ಭಾರತೀಯ ತಂಡವು ಅದ್ಭುತ ಪ್ರದರ್ಶನ ನೀಡಿದೆ, ಗೆಲುವಿಗೆ ಅರ್ಹ : ಟಿಮ್ ಪೆನ್

ದೇಶ(ನವದೆಹಲಿ)ಜ.20:- ಭಾರತದ ಕೈಯಲ್ಲಿ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಸೋತು ಸರಣಿಯನ್ನು ಕಳೆದುಕೊಂಡ ನಂತರ, ಆತಿಥೇಯ ಆಸ್ಟ್ರೇಲಿಯಾ ನಾಯಕ ಟಿಮ್ ಪೆನ್ ಭಾರತ ತಂಡವನ್ನು ಶ್ಲಾಘಿಸಿದ್ದಾರೆ. ಶಿಸ್ತುಬದ್ಧ ಪ್ರದರ್ಶನದ ಆಧಾರದ ಮೇಲೆ, ಈ ಸರಣಿಯನ್ನು ಗೆಲ್ಲಲು ಟೀಮ್ ಇಂಡಿಯಾ ಸಂಪೂರ್ಣ ಅರ್ಹತೆಯನ್ನು ಪಡೆದಿತ್ತು ಎಂದು ಹೇಳಿದ್ದಾರೆ. ಭಾರತದ ಯುವ ಕ್ರಿಕೆಟ್ ತಂಡವು ಮಂಗಳವಾರ ಆಸ್ಟ್ರೇಲಿಯಾವನ್ನು ಮೂರು ವಿಕೆಟ್ ‌ಗಳಿಂದ ಸೋಲಿಸುವ ಮೂಲಕ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದೆ. ಇದನ್ನು ಭಾರತದ ಸಾರ್ವಕಾಲಿಕ ಶ್ರೇಷ್ಠ ಟೆಸ್ಟ್ ಸರಣಿಯ ಗೆಲುವು ಎಂದು ಪರಿಗಣಿಸಲಾಗಿದೆ.
ನಾವು ಸರಣಿಯನ್ನು ಗೆಲ್ಲಲು ಇಲ್ಲಿಗೆ ಬಂದಿದ್ದೇವೆ, ಆದರೆ ಭಾರತೀಯ ತಂಡವು ಅವರ ಶಿಸ್ತುಬದ್ಧ ಮತ್ತು ಉತ್ತಮ ಪ್ರದರ್ಶನದ ಆಧಾರದ ಮೇಲೆ ನಮ್ಮನ್ನು ಸೋಲಿಸಿದೆ. ಈ ಸರಣಿಯನ್ನು ಗೆಲ್ಲಲು ಅವರಿಗೆ ಸಂಪೂರ್ಣ ಅರ್ಹತೆ ಇದೆ” ಎಂದು ಪೆನ್ ಪಂದ್ಯದ ನಂತರ ಹೇಳಿದ್ದಾರೆ.
ಆಸ್ಟ್ರೇಲಿಯಾದ ನಾಯಕ, “ನಾವು ಮತ್ತೆ ವಿಷಯಗಳನ್ನು ಹಿಂತಿರುಗಿ ನೋಡಬೇಕಿದೆ. ಅವುಗಳನ್ನು ಸುಧಾರಿಸಬೇಕಿದೆ. ನಾವು ಮತ್ತೆ ಒಂದು ತಂಡವಾಗಿ ಒಂದಾಗಬೇಕು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾವು ಸಾಕಷ್ಟು ಸುಧಾರಿಸಬೇಕಾದ ಹಲವು ಕ್ಷೇತ್ರಗಳಿವೆ. 300 ಕ್ಕೂ ಹೆಚ್ಚು ರನ್‌ ಗಳ ಗುರಿಯನ್ನು ಅವರ ಮುಂದೆ ಇಡಲು ನಿಶ್ಚಯಿಸಿದ್ದೆವು. ಸರಣಿಯನ್ನು ಗೆಲ್ಲಲು ಒತ್ತಡಕ್ಕೆ ತರಲು ನಾವು ಬಯಸಿದ್ದೆವು.
ಇಂದು ಭಾರತ ತಂಡವು ಆಲ್ ಔಟ್ ಆಗುತ್ತದೆ ಎಂದು ನಾವು ಭಾವಿಸಿದ್ದೆವು. ನಮ್ಮ ಬೌಲರ್ ‌ಗಳು ಉತ್ತಮ ಪ್ರದರ್ಶನ ನೀಡಿದರು. ಆದರೆ ಈ ಗೆಲುವಿನ ಶ್ರೇಯಸ್ಸು ಈ ಸರಣಿಯಲ್ಲಿನ ಅದ್ಭುತ ಪ್ರದರ್ಶನಕ್ಕಾಗಿ ಭಾರತೀಯ ತಂಡಕ್ಕೆ ಸಲ್ಲುತ್ತದೆ” ಎಂದಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: