Uncategorizedಪ್ರಮುಖ ಸುದ್ದಿಮೈಸೂರು

ಚಾಮುಂಡಿ ಬೆಟ್ಟದಲ್ಲಿ ರಸ್ತೆ ಅಪಘಾತ: ಮೂವರಿಗೆ ಗಾಯ

ಚಾಮುಂಡಿ ಬೆಟ್ಟದಲ್ಲಿ ಶುಕ್ರವಾರ ಬೆಳಗ್ಗೆ ನಡೆದ ರಸ್ತೆ ಅಪಘಾತದಲ್ಲಿ ಮೈಸೂರಿನ ಮೂವರು ಯುವಕರು ಗಾಯಗೊಂಡಿದ್ದಾರೆ. ಸ್ನೇಹಿತ ವಿಜಯ್‍ ಹುಟ್ಟಿದಹಬ್ಬದ ಅಂಗವಾಗಿ ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿ ವಾಪಸಾಗುತ್ತಿದ್ದರು. ಹೋಗುತ್ತಿದ್ದ ಸಂದರ್ಭ ಈ ಅವಘಡ ಸಂಭವಿಸಿದೆ. ಗಾಯಾಳುಗಳನ್ನು ಕೆ.ಜಿ.ಕೊಪ್ಪಲಿನ ಪ್ರಜ್ವಲ್, ಅರವಿಂದನಗರದ ಪ್ರಶಾಂತ್ ಡಿಸೋಜ, ಬಸವೇಶ್ವರನಗರದ ಗಗನ್ ಎಂದು ಗುರುತಿಸಲಾಗಿದೆ.

ಚಾಮುಂಡಿಬೆಟ್ಟದಿಂದ ವಾಪಸಾಗುತ್ತಿದ್ದ ಸಂದರ್ಭ ತಿರುವಿನಲ್ಲಿ ಬೈಕ್‍ ಚಲಾಯಿಸುತ್ತಿದ್ದ ಸಂದರ್ಭ ಘಟನೆ ಸಂಭವಿಸಿದೆ. ಬೈಕ್ನಲ್ಲಿ ಮೂವರು ಸವಾರರಿದ್ದು, ಚಾಮುಂಡಿ ಬೆಟ್ಟಕ್ಕೆ ತೆರಳುತ್ತಿದ್ದ ಬೈಕ್‍ಗೆ ಡಿಕ್ಕಿಯಾಗಿದೆ. ಪ್ರಜ್ವಲ್‍ ತಲೆಗೆ ಏಟಾಗಿದ್ದು, ಇನ್ನಿಬ್ಬರಿಗೂ ಸಣ್ಣ ಪ್ರಮಾಣದ ಗಾಯಗಳಾಗಿವೆ. ಅಪಘಾತ ನಡೆದು ಯುವಕರು ರಸ್ತೆ ಮೇಲೆ ಬಿದ್ದು ಹೊರಳಾಡುತ್ತಿದ್ದರೂ ಯಾರೂ ಸಹಾಯಕ್ಕೆ ಧಾವಿಸಿಲ್ಲ. ಬದಲಿಗೆ, ಫೋಟೊ, ವಿಡಿಯೋ ತೆಗೆಯುವುದರಲ್ಲಿ ನಿರತರಾಗಿದ್ದರು.

ಮುಂಜಾನೆ ವಾಕಿಂಗ್‍ಗೆ ಬೆಟ್ಟಕ್ಕೆ ತೆರಳಿದ್ದ ಶಾಸಕ ಸೋಮಶೇಖರ್, ಗಾಯಗೊಂಡವರನ್ನು ಕಂಡು ಕೂಡಲೇ ತನ್ನ ಕಾರು ತರಿಸಿ ಅವರನ್ನು ಜೆಎಸ್‍ಎಸ್‍ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತ ನಡೆದ ಸಂದರ್ಭದಲ್ಲಿ ಸಮ್ಮನೆ ನಿಂತು ನೋಡಬೇಡಿ. ಅಥವಾ ವಿಡಿಯೋ ಮಾಡಬೇಡಿ. ಶೀರ್ಘ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ. ಇದರಿಂದ ನಿಮ್ಮ ಮೇಲೆ ಯಾವುದೇ ಕೇಸ್‍ ದಾಖಲಾಗುವುದಿಲ್ಲ ಎಂದು ಘಟನಾ ಸ್ಥಳದಲ್ಲಿ ನೆರೆದಿದ್ದವರಿಗೆ ತಿಳಿಸಿದರು. ಸಿದ್ದಾರ್ಥನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೈಕ್‍ ಅನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

 

 

Leave a Reply

comments

Related Articles

error: