ದೇಶಪ್ರಮುಖ ಸುದ್ದಿ

ಗಡಿಯಲ್ಲಿ 3 ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ: 4 ಯೋಧರಿಗೆ ಗಾಯ

ಶ್ರೀನಗರ,ಜ.20-ಗಡಿ ನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನ ಮೂಲದ ಮೂವರು ಉಗ್ರರನ್ನು ಭದ್ರತಾ ಪಡೆಯವರು ಹೊಡೆದುರುಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಅಖ್ನೂರ್ ಸೆಕ್ಟರ್ ಬಳಿಯಿರುವ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿ ಕದನ ವಿರಾಮ ಉಲ್ಲಂಘಿಸಿದೆ. ಕದನ ವಿರಾಮ ಉಲ್ಲಂಘಿಸಿ ಉಗ್ರರು ಗಡಿ ನುಸುಳುವುದಕ್ಕೆ ಸಹಾಯ ಮಾಡಿದೆ.

ಈ ವೇಳೆ ಗಡಿ ನುಸುಳಲು ಯತ್ನಿಸಿದ ಮೂವರು ಉಗ್ರರನ್ನು ಭಾರತೀಯ ಭದ್ರತಾ ಪಡೆ ಹೊಡೆದುರುಳಿಸಿದೆ. ಅಪ್ರಚೋದಿತ ಗುಂಡಿನ ದಾಳಿಯಲ್ಲಿ ನಾಲ್ವರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾಡಲಾಗಿರುವ ಮೂವರು ಉಗ್ರರ ಮೃತದೇಹಗಳು ಗಡಿ ಬಳಿಯೇ ಇದ್ದೂ, ಈವರೆಗೂ ಮೃತದೇಹಗಳನ್ನು ಪಾಕಿಸ್ತಾನ ಪಡೆಗಳು ವಶಕ್ಕೆ ಪಡೆದಿಲ್ಲ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್,ಎಂ.ಎನ್)

Leave a Reply

comments

Related Articles

error: