
ಕರ್ನಾಟಕದೇಶಪ್ರಮುಖ ಸುದ್ದಿ
ಇದುವರೆಗೆ ಲಸಿಕೆ ಪಡೆದ 6,31,417 ಆರೋಗ್ಯ ಕಾರ್ಯಕರ್ತರು : ಕರ್ನಾಟಕದಲ್ಲಿಯೇ ಅತಿ ಹೆಚ್ಚು
ದೇಶ(ನವದೆಹಲಿ)ಜ.20:- ರಾಷ್ಟ್ರವ್ಯಾಪಿ ಕೊರೋನಾ ಲಸಿಕಾಭಿಯಾನದ ನಾಲ್ಕನೇ ದಿನವಾದ ಮಂಗಳವಾರ ಸಂಜೆ 6 ಗಂಟೆಯವರೆಗೆ ಒಂದು ಲಕ್ಷ 77 ಸಾವಿರ 368 ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ.
ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಕೊನೆಯ ವರದಿಯ ಪ್ರಕಾರ, ಸಂಜೆ 6 ರವರೆಗೆ ಒಟ್ಟು 6 ಲಕ್ಷ 31 ಸಾವಿರ 417 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ. ಅದೇ ವೇಳೆ, ಒಟ್ಟು ಒಂಭತ್ತು ಎಇಎಫ್ಐ ಅಂದರೆ ರೋಗನಿರೋಧಕ ದೂರುಗಳ ನಂತರದ ಪ್ರತಿಕೂಲ ಪರಿಣಾಮಗಳು ವರದಿಯಾಗಿವೆ. ಅಂತಹವರನ್ನು ಆಸ್ಪತ್ರೆಗೆ ಸೇರಿಸುವ ಅಗತ್ಯ ಕಂಡು ಬಂದಿದ್ದು ಸೇರಿಸಲಾಗಿದೆ ಎನ್ನಲಾಗಿದೆ.
ರಾಜಧಾನಿ ದೆಹಲಿಯಲ್ಲಿ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಮೂವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಒಂದು ಪ್ರಕರಣ ಶಹದಾರಾದ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ನಿಗಾದಲ್ಲಿದೆ.
ಉತ್ತರಾಖಂಡದಲ್ಲಿ ಒಂದು ಪ್ರಕರಣ ಬೆಳಕಿಗೆ ಬಂದಿದ್ದು, ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಕರ್ನಾಟಕದಲ್ಲಿ ಓರ್ವ ವ್ಯಕ್ತಿಯನ್ನು ಬಿಡುಗಡೆ ಮಾಡಲಾಗಿದೆ, ಇನ್ನೊಬ್ಬ ವ್ಯಕ್ತಿ ಸ್ಥಿರವಾಗಿದ್ದು, ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದಾರೆ. ಛತ್ತೀಸ್ ಗಢದಲ್ಲಿಯೂ ಓರ್ವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು, ಬಳಿಕ ಡಿಸ್ಚಾರ್ಜ್ ಮಾಡಲಾಗಿದೆ. ರಾಜಸ್ಥಾನದಲ್ಲಿಯೂ ಓರ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರ ಮೇಲ್ವಿಚಾರಣೆಯಲ್ಲಿದ್ದರು, ಅವರ ಆರೋಗ್ಯ ಸ್ಥಿರವಾಗಿದೆ ಎನ್ನಲಾಗಿದೆ.
ಅಂಡಮಾನ್ ನಿಕೋಬಾರ್ – 644, ಆಂಧ್ರಪ್ರದೇಶ – 58,495, ಅರುಣಾಚಲ ಪ್ರದೇಶ – 2,805, ಅಸ್ಸಾಂ – 7,418, ಬಿಹಾರ – 42,085, ಚಂಡೀಗಢ—469, ಛತ್ತೀಸ್ ಗಢ – 10,872, ದಾದ್ರಾ ಮತ್ತು ನಗರ ಹವೇಲಿ – 114, ದಮನ್ ಮತ್ತು ಡಿಯು – 94, ದೆಹಲಿ – 12,441,ಗೋವಾ – 426,ಗುಜರಾತ್ – 17,581,ಹರಿಯಾಣ – 24,944,ಹಿಮಾಚಲ ಪ್ರದೇಶ – 5,049,ಜಮ್ಮು ಮತ್ತು ಕಾಶ್ಮೀರ – 4,395,ಜಾರ್ಖಂಡ್ – 8,824,ಕರ್ನಾಟಕ – 80,686,ಕೇರಳ – 23855,ಲಡಾಖ್ – 119,ಲಕ್ಷದ್ವೀಪ – 369,ಮಧ್ಯಪ್ರದೇಶ – 18,174,ಮಹಾರಾಷ್ಟ್ರ – 30,247,ಮಣಿಪುರ – 1111,ಮೇಘಾಲಯ – 1037,ಮಿಜೋರಾಂ – 1091,ನಾಗಾಲ್ಯಾಂಡ್ – 2,286,ಒಡಿಶಾ – 55,138,ಪುದುಚೇರಿ – 719,ಪಂಜಾಬ್ – 5,567,ರಾಜಸ್ಥಾನ – 30,761,ಸಿಕ್ಕಿಂ – 350,ತಮಿಳುನಾಡು – 25,251,ತೆಲಂಗಾಣ – 69,405,ತ್ರಿಪುರ – 3,734,ಉತ್ತರ ಪ್ರದೇಶ – 22,644,ಉತ್ತರಾಖಂಡ – 6,107,ಪಶ್ಚಿಮ ಬಂಗಾಳ – 42,093, ವಿವಿಧ – 14,017 ಮಂದಿ ಲಸಿಕೆ ಪಡೆದಿದ್ದಾರೆಂದು ಮಾಧ್ಯಮವೊಂದು ವರದಿ ಮಾಡಿದೆ. (ಏಜೆನ್ಸೀಸ್,ಎಸ್.ಎಚ್)