ಮೈಸೂರು

ಮೈಸೂರಿನ ಜನತೆಗೆ ಭಯಾನಕ ಅನುಭವ : ಅಲ್ಲಿ ಹೋದರೆ ವಾಪಸ್ ಬರಲ್ಲ!?

ಸಾಂಸ್ಕೃತಿಕ ನಗರಿ  ಮೈಸೂರಿನಲ್ಲಿ ವಿಚಿತ್ರ ಅನುಭವವಾಗಿದೆ. ಅಲ್ಲಿನ ಜನತೆ ಭಯಭೀತರಾಗಿದ್ದಾರೆ. ಅಂಥಹ ಭಯಾನಕ ವಾತಾವರಣ ಅಲ್ಲಿ ಸೃಷ್ಟಿಯಾಗಿದೆ. ಯಾಕೆಂದರೆ ಅಲ್ಲಿ ಹೋದವರೂ ಯಾರೂ ಜೀವಂತ ಬರಲಾರರು!

ಮೈಸೂರಿನಲ್ಲಿ  ಮಣ್ಣು ಕೊತ ಕೊತ ಕುದಿಯುತ್ತಿದ್ದು, ಭೂಮಿತಾಯಿ ಓಡಲಾಳಕ್ಕೆ ಸೆಳೆಯುತ್ತಿದ್ದಾಳೆ. ಅಪ್ಪಿ ತಪ್ಪಿ ನೀವಿಲ್ಲಿ ಕಾಲಿಟ್ಟರೆ ನಿಮಗರಿವಿಲ್ಲದೇ ನೀವು ಭೂಗರ್ಭ ಸೇರುತ್ತೀರಿ.

ಮೈಸೂರಿನ ಆರ್ ಬಿ ಐ ಹಿಂಬಾಗದ ಭೂಮಿಯಲ್ಲಿ ಈ ವಿಚಿತ್ರ ನಡೆಯುತ್ತಿದ್ದು, ಕುಂಬಾರಕೊಪ್ಪಲು ನಿವಾಸಿ ಸೋಮಣ್ಣ ಅವರಿಗೆ ಸೇರಿದ ನಾಲ್ಕು ಎಕರೆ ಭೂಮಿಯಲ್ಲಿ ಕೌತುಕ ಸೃಷ್ಟಿಯಾಗಿದೆ.  ಈ ಭೂಮಿಗೆ ಕಾಲಿಟ್ಟ ಬಾಲಕ ಆಸ್ಪತ್ರೆ ಸೇರಿ ಹಾಗೆಯೇ ಮಸಣ ಸೇರಿದ್ದಾನೆ.  ಘಟನೆಯಿಂದ ಅಕ್ಕಪಕ್ಕದ ಗ್ರಾಮಗಳ ಜನರು ಭಯಭೀತರಾಗಿದ್ದಾರೆ. ಕಂದೇನಹಳ್ಳಿ ಮೂಲದ ಹಾಲಿ ಬೆಲವತ್ತ ಗ್ರಾಮದಲ್ಲಿ ವಾಸಿಸುತ್ತಿರುವ ಜಾನಕಿ ಮತ್ತು ಮೂರ್ತಿ ಎಂಬ ದಂಪತಿಯ ಪುತ್ರ ಹರ್ಷಲ್ (14) ಎಂಬಾತ ಬಹಿರ್ದೆಸೆಗೆಂದು ತೆರಳಿದವನು ಕಾಲು, ಮೈ, ಕೈ ಎಲ್ಲವೂ ಸುಟ್ಟ ಗಾಯದ ಸ್ಥಿತಿಯಲ್ಲಿ ಆಸ್ಪತ್ರೆಗೆ ಸೇರಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಈ ಜಾಗವು ಮೈಸೂರು ತಾಲೂಕಿನ ಕ್ಯಾದನಹಳ್ಳಿ ಸರ್ವೆ ನಂಬರ್ ವ್ಯಾಪ್ತಿಗೆ ಬರುವ ಜಮೀನಾಗಿದ್ದು, ಭೂ ವಿಜ್ಞಾನಿಗಳಿಗೂ ಸವಾಲಾಗಿ ಪರಿಣಮಿಸಿದೆ. ಹಗಲಿನಲ್ಲಿ ದೂರದಿಂದ ನೋಡಿದರೆ ಏನೂ ಕಾಣಿಸದ ಈ ಜಾಗ ರಾತ್ರಿಯಾದಂತೆ ಕೆಂಡದಂತೆ ಕೆಂಪಗೆ ಗೋಚರಿಸುತ್ತದೆ ಎಂದು ತಿಳಿದು ಬಂದಿದೆ. ಮತ್ತೋರ್ವ ಸ್ಥಳೀಯ ನಿವಾಸಿ  ಮಂಜುನಾಥ್ ಎಂಬವರು ಐಸಿಯುನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ  ಹಿರಿಯ ಭೂ ವಿಜ್ಞಾನಿಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ದೌಡಾಯಿಸಿದ್ದಾರೆ.

 ಮಗಧೀರ ಚಲನ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಮಣ್ಣು ಸೆಳೆದಂತೆ ಇಲ್ಲಿಯೂ ಮಣ್ಣು ಸೆಳೆಯುತ್ತಿದೆ. ತಿಳಿಯದೆ ಈ ಜಮೀನಿಗೆ ಕಾಲಿಟ್ಟರೆ  ಕ್ಷಣಾರ್ಧದಲ್ಲಿ ಭಸ್ಮವಾಗುತ್ತೇವೆ. ಹರ್ಷಲ್ ಶವವಿಟ್ಟು ನಾಳೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆ. ಮೇಟಗಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ತಹಶೀಲ್ದಾರ್ ರಮೇಶ್ ಬಾಬು ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿದ್ದಾರೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: