ಮೈಸೂರು

ನಾಳೆ ವಿದ್ಯುತ್ ನಿಲುಗಡೆ

ಮೈಸೂರು, ಜ. 21:- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ಕುವೆಂಪುನಗರ ಉಪವಿಭಾಗ 66/11ಕೆ.ವಿ ಆರ್.ಕೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 11ಕೆ.ವಿ ಕುವೆಂಪು ವಿದ್ಯುತ್ ಮಾರ್ಗದಲ್ಲಿ ಜನವರಿ 22ರಂದು ಎಲ್& ಟಿ ಅವರಿಂದ ಭೂಗತ ಕೇಬಲ್ ಅಳವಡಿಸುವ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆ 66/11ಕೆ.ವಿ ಕುವೆಂಪುನಗರ ಉಪವಿಭಾಗದ ಮಾರುತಿ ದೇವಸ್ಥಾನದ ರಸ್ತೆ, ವಿಶ್ವಮಾನವ ಜೋಡಿರಸ್ತೆ, ಗ್ರಂಥಾಲಯ ಸುತ್ತಮುತ್ತ, ಕಾಮಾಕ್ಷಿ ಆಸ್ಪತ್ರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಿದೆ ಎಂದು ವಿ.ವಿ.ಮೊಹಲ್ಲಾ ವಿಭಾಗ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: