ಮೈಸೂರು

ಕ್ಷುಲ್ಲಕ ಕಾರಣಕ್ಕೆ ಯುವಕರಿಬ್ಬರಿಗೆ ಚಾಕುವಿನಿಂದ ಇರಿತ ಪ್ರಕರಣ : ವ್ಯಕ್ತಿಯ ಬಂಧನ

ಮೈಸೂರು,ಜ.21:- ಕ್ಷುಲ್ಲಕ ಕಾರಣಕ್ಕೆ ಸೋಮವಾರ ಯುವಕರಿಬ್ಬರಿಗೆ ಚಾಕು ಇರಿದು ಪರಾರಿಯಾಗಿದ್ದ ವ್ಯಕ್ತಿ ಬಂಡಿಕೇರಿಯ ನಿವಾಸಿ ಜಯಕುಮಾರ್ ಅವರನ್ನು ಲಕ್ಷ್ಮೀಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜಯಕುಮಾರ್ ಎಂಬಾತ ಸೋಮವಾರ ರಾತ್ರಿ ರಂಜಿತ್ ಮತ್ತು ಅರುಣ್ ಎಂಬವರಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿ ಪರಾರಿಯಾಗಿದ್ದ. ಈತನ ಪತ್ತೆಗೆ ತಂಡ ರಚಿಸಲಾಗಿತ್ತು. ಬುಧವಾರ ಶಾಂತಲ ಟಾಕೀಸ್ ಹಿಂಭಾಗದ ಸ್ನೇಹಿತನ ರೂಮಿನಲ್ಲಿ ಇದ್ದ ಈತನನ್ನು ಬಂಧಿಸಲಾಗಿದೆ. ಲಕ್ಷ್ಮೀಪುರಂ ಠಾಣೆಯ ಇನ್ಸ್ಪೆಕ್ಟರ್ ವೆಂಕಟೇಶ್ ಸಲಹೆ, ಸೂಚನೆ ಮೇರೆಗೆ ಸಿಬ್ಬಂದಿಗಳಾದ ಕಾರ್ತಿಕ್, ಆದಿಲ್, ಸೋಮಣ್ಣ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: