
ಮೈಸೂರು
ಮನೆಯಲ್ಲೇ ವಿದ್ಯಾರ್ಥಿನಿಯ ಮೃತದೇಹ ಪತ್ತೆ
ಮೈಸೂರು,ಜ.21:- ಮೃತಪಟ್ಟ ಸ್ಥಿತಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿಯೋರ್ವರ ದೇಹ ಮನೆಯೊಂದರಲ್ಲಿ ಪತ್ತೆಯಾಗಿರುವ ಘಟನೆ ನಗರದ ಬೋಗಾದಿಯಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ವರ್ಷಿಕಾ (20) ಎಂದು ಹೇಳಲಾಗಿದ್ದು, ಸಾವು ಅನುಮಾನವನ್ನು ಹುಟ್ಟು ಹಾಕಿದೆ. ವರ್ಷಿಕಾ ಸಿಟಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಷಯ ಅಧ್ಯಯನ ಮಾಡುತ್ತಿದ್ದರು. ಮಹೇಶ್ ಎಂಬವರೇ ಈಕೆ ತಂದೆ ಎನ್ನಲಾಗಿದ್ದು, ಪರೀಕ್ಷೆಗೆಂದು ರಾತ್ರಿ ಓದುತ್ತಿದ್ದು, ನಂತರ ಊಟ ಮಾಡಿ ಮಲಗಿದ್ದಳು ಎಂದು ಹೇಳಲಾಗಿದೆ.
ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)