ಮೈಸೂರು

ಸಿದ್ಧಗಂಗಾಶ್ರೀಶಿವಕುಮಾರ ಸ್ವಾಮೀಜಿಯವರ ದಾರಿಯಲ್ಲಿ ಸಾಗಬೇಕು : ಎಲ್ ಆರ್ ಮಹದೇವ್ ಸ್ವಾಮಿ

ಮೈಸೂರು,ಜ.21:- ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮಿಗಳ 2 ನೇ ವರ್ಷದ ಪುಣ್ಯಸ್ಮರಣೆ ಯನ್ನು ಚಾಮುಂಡಿಪುರಂ ವೃತ್ತದಲ್ಲಿ ಇಂದು ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸುವ ಮೂಲಕ ಸಂಸ್ಮರಣೋತ್ಸವ ಆಚರಿಸಲಾಯಿತು.
ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಮೃಗಾಲಯ ಪ್ರಾಧಿಕಾರ ಅಧ್ಯಕ್ಷರಾದ ಎಲ್ ಆರ್ ಮಹದೇವ್ ಸ್ವಾಮಿ ಶ್ರೀಗಳ ದಾರಿಯಲ್ಲಿ ಸಾಗೋಣ, ಶಿವಕುಮಾರಸ್ವಾಮೀಜಿ ಸೂರ್ಯನಂತೆ ಎಲ್ಲರ ಮನೆ, ಮನಸ್ಸು ಬೆಳಗುವ ಮಹಾನ್ ಚೇತನ. ಶ್ರೀಗಳು ನಮ್ಮೊಂದಿಗೆ ಇಂದಿಗೂ ಇದ್ದಾರೆ, ಮುಂದೆಯೂ ಇರುತ್ತಾರೆ. ಶಿವ ಕುಮಾರಸ್ವಾಮೀಜಿ ಅವರನ್ನು ಸ್ಮರಣೆ ಮಾಡುವುದರೊಂದಿಗೆ ಅವರ ದಾರಿ ಯಲ್ಲಿ ನಾವು ಸಾಗಬೇಕು, ಅವರ ದಾರಿಯಲ್ಲಿ ಸಾಗಿದರೆ ಮಾತ್ರ ಅವರ ಸಂಸ್ಮರಣೋತ್ಸವ ಸಾರ್ಥಕವಾಗುತ್ತದೆ’ ಎಂದು ಹೇಳಿದರು.
ಮಹಾನಗರ ಪಾಲಿಕಾ ಸದಸ್ಯರಾದ ಮಾ ವಿ ರಾಮಪ್ರಸಾದ್ ಮಾತನಾಡಿ ‘ತ್ರಿವಿಧ ದಾಸೋಹಿಗಳಾದ ಡಾ.ಶಿವಕುಮಾರ ಸ್ವಾಮೀಜಿ ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದೇ ಇದ್ದರೂ ಮಾನಸಿಕವಾಗಿ ನಮ್ಮೊಂದಿಗೆ ಇದ್ದಾರೆ. ಇಷ್ಟಲಿಂಗ ಪೂಜೆಯನ್ನು ಜಗತ್ತಿಗೆ ತೋರಿಸಿಕೊಟ್ಟವರು ಶಿವಕುಮಾರ ಸ್ವಾಮೀಜಿ. ಇಷ್ಟಲಿಂಗ ಪೂಜೆ ಯನ್ನು ಇಷ್ಟಪಟ್ಟು ಮಾಡುತ್ತಲೇ ತಮ್ಮ ಶಕ್ತಿ ಪಡೆದುಕೊಳ್ಳುತ್ತಿದ್ದರು’ ಎಂದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಲಕ್ಷ್ಮೀದೇವಿ ಮಾತನಾಡಿ ‘ಶಿವಕುಮಾರ ಸ್ವಾಮೀಜಿಯ ಸ್ಮರಣೆಯೇ ನಮಗೆ ಬೆಳಕು. ಅವರು ಕರಗದೇ ಇರುವ ಮುತ್ತು. ತಮ್ಮ ಜೀವನವೇ ಸಂದೇಶ ಎಂಬಂತೆ ಬದುಕಿದ ಶ್ರೀಗಳು ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ’ ಎಂದರು.
ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣ್ ಗೌಡ ಮಾತನಾಡಿ ತುಮಕೂರು ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು , ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳು ಮಾಡಿದ ಕಾರ್ಯ ದೇಶಕ್ಕೆ ಮಾದರಿಯಾಗಿದೆ ಭಾರತ ರತ್ನ ನೀಡಿ ಗೌರವಿಸಿದರೆ ಪ್ರಶಸ್ತಿಗೆ ಗೌರವ ನೀಡಿದಂತಾಗುತ್ತದೆ .ಜಾತಿ, ಮತ, ಪಂಥ, ಭಾಷೆ,ಧರ್ಮ ಎನ್ನದೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಿ ನಾಡನ್ನು ಶ್ರೀಮಂತಗೊಳಿಸಿದ ಶ್ರೀಗಳಿಗೆ ತಕ್ಷಣವೇ ಭಾರತ ರತ್ನ ಪ್ರಶಸ್ತಿ ಘೋಷಿಸಬೇಕು ಎಂದರು.
ಅವರು ಮತ್ತೊಬ್ಬ ಬಸವಣ್ಣ ಕಾಯಕಯೋಗಿ, ಸಾಮಾಜಿಕ ನ್ಯಾಯ ಹರಿಕಾರ, ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ನಮ್ಮ ಮಠದ ಕಾಯಕದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು. ಕ್ಷೇತ್ರ ಸರ್ವತೋಮುಖವಾಗಿ ಬೆಳೆದು ಬಡವರಿಗೆ, ಅಶಕ್ತರಿಗೆ ಅನ್ನ, ವಿದ್ಯೆ ನೀಡಿ ಆಸರೆಯಾಗಲಿ ಎಂದು ಹರಿಸುತ್ತಿದ್ದರು. ಸಮಸ್ತ ಮಠಮಾನ್ಯಗಳಿಗೆ ಹಾಗೂ ಇಡೀ ಗುರುವೃಂದಕ್ಕೆ ತಿಲಕಪ್ರಾಯರಾಗಿದ್ದ ಪೂಜ್ಯರು ನಮ್ಮೆಲ್ಲರಿಗೂ ಮಾರ್ಗಜ್ಯೋತಿಯಾಗಿದ್ದರು ಎಂದರು.
ಕಾರ್ಯಕ್ರಮದಲ್ಲಿ ಎಸ್ ಎಂ ಪಿ ಡೆವಲಪರ್ಸ್ ವ್ಯವಸ್ಥಾಪಕರಾದ ಎಸ್ ಎಂ ಶಿವಪ್ರಕಾಶ್ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ರಾಜ್ಯ ಸದಸ್ಯರಾದ ರೇಣುಕಾ ರಾಜ್ ,ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್ ,ಅಜಯ್ ಶಾಸ್ತ್ರಿ ,ಎಸ್ .ಎನ್. ರಾಜೇಶ್,ಸಿಂಡಿಕೇಟ್ ಜಗದೀಶ್, ಬಸವರಾಜು ,ಪ್ರವೀಣ್ ,ನವೀನ್, ನಾಗೇಂದ್ರ ,ಸುಚೀಂದ್ರ,ಬಿಜೆಪಿ ನರಸಿಂಹರಾಜ ಕ್ಷೇತ್ರದ ಯುವಮೋರ್ಚಾ ಅಧ್ಯಕ್ಷರಾದ ಲೋಹಿತ್ , ಚಕ್ರಪಾಣಿ ,ಜಿ ಎಂ ಪಂಚಾಕ್ಷರಿ ಇನ್ನಿತರರು ಹಾಜರಿದ್ದರು.

Leave a Reply

comments

Related Articles

error: