ಪ್ರಮುಖ ಸುದ್ದಿವಿದೇಶ

ಬಾಗ್ದಾದ್‌ ನಲ್ಲಿ ಬಾಂಬ್ ಸ್ಫೋಟ: 6 ಮಂದಿ ಸಾವು, 21 ಮಂದಿಗೆ ಗಾಯ

ಬಾಗ್ದಾದ್‌,ಜ.21-ಇರಾಕ್‌ ರಾಜಧಾನಿ ಬಾಗ್ದಾದ್‌ನ ವಾಣಿಜ್ಯ ಕೇಂದ್ರವೊಂದರ ಬಳಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 6 ಮಂದಿ ಮೃತಪಟ್ಟಿದ್ದಾರೆ.

ವಾಣಿಜ್ಯ ಕೇಂದ್ರದ ಬಳಿ ಎರಡು ಕಡೆ ಬಾಂಬ್ ಸ್ಫೋಟ ಸಂಭವಿಸಿದ್ದು, 6 ಮಂದಿ ಮೃತಪಟ್ಟು ಮೂವರು ಪೊಲೀಸ್ ಅಧಿಕಾರಿಗಳು ಸೇರಿದಂತೆ 21 ಮಂದಿ ಗಾಯಗೊಂಡಿದ್ದಾರೆ.

ಘಟನೆಯಲ್ಲಿ ಗಾಯಗೊಂಡಿರುವ ಹಲವರ ಸ್ಥಿತಿ ಗಂಭೀರವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದು ಆತ್ಮಾಹುತಿ ದಳದವರು ಮಾಡಿರುವ ಸ್ಫೋಟ ಎಂದು ಇರಾಕ್‌ ದೂರದರ್ಶನವೊಂದು ವರದಿ ಮಾಡಿದೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: