ದೇಶಪ್ರಮುಖ ಸುದ್ದಿ

ಹೈದರಾಬಾದ್ ನಲ್ಲಿ ಅಗ್ನಿ ಅವಘಡ: 12 ಮಂದಿಗೆ ಗಾಯ

ಹೈದರಾಬಾದ್‌,ಜ.21-ಆಭರಣ ಘಟಕದ ಆವರಣದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 12 ಮಂದಿ ವಲಸೆ ಕಾರ್ಮಿಕರಿಗೆ ಗಾಯಗೊಂಡಿದ್ದಾರೆ.

ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಇಲ್ಲಿನ ಆಭರಣ ಘಟಕದ ಆವರಣದಲ್ಲಿ ಬೆಂಕಿ ಅವಘಢ ಸಂಭವಿಸಿದೆ. ಅನಿಲ ಸೋರಿಕೆಯಾಗಿ ಎರಡು ಕೊಠಡಿಗಳಿಗೆ ಬೆಂಕಿ ಆವರಿಸಿತ್ತು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ, ಕಾರ್ಮಿಕರನ್ನು ರಕ್ಷಿಸಿದ್ದಾರೆ.

ಗಾಯಗೊಂಡಿರುವ ವಲಸೆ ಕಾರ್ಮಿಕರು ಪಶ್ಚಿಮ ಬಂಗಾಳದವರು ಎಂದು ಹೇಳಲಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. (ಏಜೆನ್ಸೀಸ್, ಎಂ.ಎನ್)

 

Leave a Reply

comments

Related Articles

error: