ಮೈಸೂರು

ಮೈಸೂರಿಗರಿಗೆ ಹೊಸ ಆಪ್

ಸಾಂಸ್ಕೃತಿ ನಗರಿ ಮೈಸೂರಿನಲ್ಲಿ ಅ.1 ರಿಂದ ವಿಶ್ವವಿಖ್ಯಾತ ದಸರಾ ಪ್ರಾರಂಭವಾಗುತ್ತಿರುವುದು ಒಂದು ಸಂಭ್ರಮದ ವಿಚಾರವಾದರೆ, ಇದೇ ಸಂದರ್ಭದಲ್ಲಿ ಮೈಸೂರಿಗರಿಗೆ ಮತ್ತು ಪ್ರವಾಸಿಗರಿಗೆ ಅನುಕೂಲವಾಗುವಂತೆ ಇಡೀ ಮೈಸೂರು ಮತ್ತು ದಸರಾ ಮಾಹಿತಿ ನೀಡಲು ಥಿಯರಂ ಕಂಪೆನಿಯು ಹೊಸ ಮೊಬೈಲ್ ಆಪ್ ನ್ನು ಬಿಡುಗಡೆ ಮಾಡಿರುವುದು ಸಂತಸದ ವಿಚಾರವಾಗಿದೆ. ಹೌದು, ಮೈಸೂರಿನ ಜನತೆ ಇನ್ನು ಮುಂದೆ ಮೈಸೂರಿನ ಬಗ್ಗೆ ತಿಳಿಯಲು ಕಷ್ಟಪಡಬೇಕಾದ ಅಗತ್ಯ ಇಲ್ಲ. ಮೈಸೂರಿನ ಯಾವುದೇ ಸ್ಥಳದ ಬಗ್ಗೆ ಕ್ಷಣಾರ್ಧದಲ್ಲಿ ಮಾಹಿತಿ ಪಡೆಯಲು ಒಂದು ಉಚಿತ ಆಪ್ ಅವರ ಕೈಗೆಟಕುತ್ತಿದೆ. ಮೈಸೂರಿನ ಥಿಯರಂ ಕಂಪನಿಯ ಒಂದು ಹೊಸ ಆವಿಷ್ಕಾರವೇ ‘ILUVMYSURU’ ಎಂಬ ಮೊಬೈಲ್ ಆಪ್. ಮೈಸೂರಿಗರಿಂದ ಮೈಸೂರಿಗರಿಗಾಗಿಯೇ ಬಿಡುಗಡೆ ಮಾಡಿರುವ ಆಪ್ ಇದಾಗಿದೆ. ಇದು ಮೈಸೂರು ಜನತೆಗೆ ಮತ್ತು ಪ್ರವಾಸಿಗಳಿಗೆ ಉತ್ತಮ ರೀತಿಯಲ್ಲಿ ಮಾಹಿತಿ ನೀಡಲು  ಸಹಕಾರಿಯಾಗಲಿದೆ.

ಆಪ್ ನ ಲಕ್ಷಣಗಳು :

  • ಮೈಸೂರಿನಲ್ಲಿ ನಡೆಯುವ ಮುಂದಿನ ಕಾರ್ಯಕ್ರಮಗಳ ಬಗ್ಗೆ ಮಾಹಿತಿ.
  • ನಗರದಿಂದ ಪ್ರವಾಸಿ ತಾಣಗಳಿಗೆ ಇರುವ ದೂರದ ಬಗ್ಗೆ, ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತಲುಪಲು ಬೇಕಾದ ಸಮಯಾವಕಾಶದ ಬಗ್ಗೆ ಮಾಹಿತಿ.
  • ನಗರದ ಪ್ರತಿಷ್ಠಿತ ಹೋಟೆಲ್ ಗಳು ಮತ್ತು ರೆಸ್ಟೋರೆಂಟ್ ಗಳ ಬಗೆಗಿನ ಸಂಪೂರ್ಣ ಮಾಹಿತಿ.
  • ಆಸ್ಪತ್ರೆಗಳು ಮತ್ತು ತುರ್ತು ಸೇವೆ ಇನ್ನೂ ಮೊದಲಾದವುಗಳ ಬಗ್ಗೆ ಸೂಕ್ತ ಮಾಹಿತಿ.
  • ಅಲ್ಲದೇ ಇದು ಗೂಗಲ್ ಮ್ಯಾಪ್ ನ್ನು ಸಹ ಒಳಗೊಂಡಿದ್ದು, ಈ ಆಪ್ ನ್ನು ಬಳಸುವವರಿಗೆ ನಿರ್ದಿಷ್ಟ ಸ್ಥಳದ ದೂರವನ್ನು ತಿಳಿಯಲು ಸಹಾಯ ಮಾಡುತ್ತದೆ.

ಈ ಆಪ್ ನ್ನು ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ ಡಿ.ರಂದೀಪ್,  ಮೈಸೂರಿಗೆ ಸಂಬಂಧಿಸಿದಂತೆ, ಮೈಸೂರಿನ ಬಗ್ಗೆ ಗೊತ್ತಿಲ್ಲದವರಿಗೆ ಹೆಚ್ಚಿನ ಮತ್ತು ಸೂಕ್ತ ಮಾಹಿತಿಯನ್ನು ಈ ಆಪ್ ನೀಡುತ್ತದೆ. ಈ ರೀತಿಯ ಸಮಾಜ ಸೇವೆಯಲ್ಲಿ ಯುವಕರು ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಳ್ಳುವ ಮೂಲಕ ದೇಶ ಕಟ್ಟುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಬೇಕು ಎನ್ನುತ್ತಾರೆ ಅವರು.

ಥಿಯರಂ ಕಂಪನಿಯ ಉಪಾಧ್ಯಕ್ಷ ಭಾಸ್ಕರ್ ಕಲಾಲೆ “ಇದು ಮೈಸೂರಿನ ನಾಗರಿಕರಿಗೆ ಮತ್ತು ಪ್ರವಾಸಿಗಳಿಗೆ ಮಾಹಿತಿ ನೀಡಲು ಈ ಆಪ್ ನ್ನು ಬಿಡುಗಡೆ ಮಾಡಿದ್ದೇವೆ. ಈ ಮೂಲಕ ಅವರು ಗೊಂದಲವಿಲ್ಲದೇ ತಮಗೆ ಬೇಕಾದ ಮಾಹಿತಿಯನ್ನು ಮತ್ತು ಸೇವೆಯನ್ನು ಪಡೆಯಬಹುದಾಗಿದೆ. ಈ ಆಪ್ ನ್ನು ಆಪಲ್ ಮತ್ತು ಆಂಡ್ರಾಯ್ಡ್ ಮೊಬೈಲ್ ಗಳಲ್ಲಿ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು. ದಸರಾ ಸಂದರ್ಭದಲ್ಲಿ ಈ ಆಪ್ ನ್ನು ಬಿಡುಗಡೆ ಮಾಡುತ್ತಿರುವುದರಿಂದ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎನ್ನುವುದು ಅವರ ಅಭಿಪ್ರಾಯ.

Leave a Reply

comments

Tags

Related Articles

error: