ಕರ್ನಾಟಕಪ್ರಮುಖ ಸುದ್ದಿ

ರಾಜ್ಯದಲ್ಲಿ 674 ಹೊಸ ಕೋವಿಡ್ ಪ್ರಕರಣ ಪತ್ತೆ

ರಾಜ್ಯ( ಬೆಂಗಳೂರು)ಜ.22:- ರಾಜ್ಯದಲ್ಲಿ 674 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಇಬ್ಬರು ಮೃತಪಟ್ಟಿದ್ದಾರೆ.
815 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಆಸ್ಪತ್ರೆಯಿಂದ ಬಿಡುಗಡೆಯಾದವರ ಒಟ್ಟು ಸೋಂಕಿತರ ಸಂಖ್ಯೆ 914492ಕ್ಕೆ ಏರಿಕೆಯಾಗಿದೆ.

ಸದ್ಯದ 7554ಸಕ್ರಿಯ ಪ್ರಕರಣಗಳಿವೆ. ಕೋವಿಡ್-19 ಖಚಿತ ಪ್ರಕರಣಗಳ ಒಟ್ಟು ಸಂಖ್ಯೆ 934252ಕ್ಕೆ ಏರಿಕೆಯಾಗಿದೆ. ಕೋವಿಡ್-19 ಸೋಂಕಿನ ಖಚಿತ ಪ್ರಕರಣಗಳ ಶೇಕಡಾವಾರು ಪ್ರಮಾಣ ಶೇ. 0.75, ಮೃತರ ಶೇಕಡಾವಾರು ಪ್ರಮಾಣ ಶೇ.0. 29 ಆಗಿದೆ.

ಬಾಗಲಕೋಟೆಯಲ್ಲಿ 0, ಬಳ್ಳಾರಿ 7, ಬೆಳಗಾವಿ 13, ಬೆಂಗಳೂರು ಗ್ರಾಮಾಂತರ 13, ಬೆಂಗಳೂರು ನಗರ 371, ಬೀದರ್ 2, ಚಾಮರಾಜನಗರ 1, ಚಿಕ್ಕಬಳ್ಳಾಪುರ 18, ಚಿಕ್ಕಮಗಳೂರು 5, ಚಿತ್ರದುರ್ಗ 6, ದಕ್ಷಿಣ ಕನ್ನಡ 39, ದಾವಣಗೆರೆ 7, ಧಾರವಾಡ 9, ಗದಗ 1, ಹಾಸನ 16, ಹಾವೇರಿ 3, ಕಲಬುರಗಿ 40, ಕೊಡಗು, 5, ಕೋಲಾರ 10, ಕೊಪ್ಪಳ 1, ಮಂಡ್ಯ 6, ಮೈಸೂರು 35, ರಾಯಚೂರು 1, ರಾಮನಗರ 2, ಶಿವಮೊಗ್ಗ 17, ತುಮಕೂರು 26, ಉಡುಪಿ 7, ಉತ್ತರ ಕನ್ನಡ 8, ವಿಜಯಪುರ 2, ಯಾದಗಿರಿಯಲ್ಲಿ 3 ಪ್ರಕರಣಗಳು ದೃಢಪಟ್ಟಿವೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: