ಕರ್ನಾಟಕಪ್ರಮುಖ ಸುದ್ದಿ

ಶಿವಮೊಗ್ಗ ಗಣಿಗಾರಿಕೆ ಸ್ಫೋಟ ಸ್ಥಳಕ್ಕೆ ಭೇಟಿ ನೀಡಿದ ಸಂಸದ ಬಿ.ವೈ.ರಾಘವೇಂದ್ರ, ಸಚಿವ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ,ಜ.22- ಶಿವಮೊಗ್ಗ ಜಿಲ್ಲೆಯ ಹುಣಸೋಡು ಗ್ರಾಮದಲ್ಲಿ ಕಲ್ಲು ಗಣಿಗಾರಿಕೆಯಲ್ಲಿ ಸಂಭವಿಸಿದ ಸ್ಫೋಟದ ಸ್ಥಳಕ್ಕೆ ಸಂಸದ ಬಿ.ವೈ.ರಾಘವೇಂದ್ರ, ಸಚಿವ ಕೆ.ಎಸ್.ಈಶ್ವರಪ್ಪ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಮಾತನಾಡಿ ಮಾಹಿತಿ ಪಡೆದುಕೊಂಡಿದ್ದಾರೆ.

ಖನಿಜ, ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರಗೇಶ್ ನಿರಾಣಿ ಸ್ಥಳಕ್ಕೆ ಹೋಗಲು ಬೆಂಗಳೂರಿನಿಂದ ಹೊರಟಿದ್ದು,  ಕೆಲವೇ ಗಂಟೆಗಳಲ್ಲಿ ಸ್ಥಳಕ್ಕೆ ತಲುಪಲಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ವೈ.ರಾಘವೇಂದ್ರ ಅವರು, ಸ್ಫೋಟದ ಬಗ್ಗೆ ತನಿಖೆ ನಡೆಯುತ್ತಿದೆ. ಬೆಂಗಳೂರು ಮತ್ತು ಮಂಗಳೂರಿನಿಂದ ಬಾಂಬ್ ನಿಷ್ಕ್ರಿಯದಳ ಸ್ಥಳಕ್ಕೆ ಆಗಮಿಸುತ್ತಿದೆ. ಈ ಪ್ರದೇಶದಲ್ಲಿ ಸುಮಾರು 40-50 ಕ್ರಷರ್‌ಗಳು ಕಾರ್ಯ ನಿರ್ವಹಣೆ ಮಾಡುತ್ತಿವೆ. ಜಿಲ್ಲಾಡಳಿತದಿಂದ ಅವರು ಲೈಸೆನ್ಸ್ ಪಡೆದಿದ್ದಾರೆ. ಭಾರೀ ಶಬ್ಧದ ಜೊತೆ ಹುಣಸೋಡು ಗ್ರಾಮದಲ್ಲಿ ಕಂಪನ ದಾಖಲಾಗಿದೆ. ಡೈನಾಮೆಟ್ ಅಥವಾ ಸ್ಫೋಟಕಗಳಿಂದಾಗಿ ಈ ಘಟನೆ ಸಂಭವಿಸಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದಿದ್ದಾರೆ.

ಈಶ್ವರಪ್ಪ ಅವರು ಮಾತನಾಡಿ, ಸ್ಫೋಟ ಶಿವಮೊಗ್ಗ ಜನರನ್ನು ತಲ್ಲಣಗೊಳಿಸಿದ್ದು ಈ ಸ್ಫೋಟಕ್ಕೂ- ನಿಗೂಢ ಶಬ್ಧಕ್ಕೂ ಸಂಬಂಧವಿದೆಯಾ ಎಂಬುದರ ಬಗ್ಗೆ ತನಿಖಾ ತಂಡ ಸ್ಪಷ್ಟತೆ ನೀಡಲಿದೆ. ಈ ಸ್ಫೋಟಕ್ಕೆ ಕಾರಣವೇನು? ಶೃಂಗೇರಿಯವರೆಗೆ ಈ ಶಬ್ಧ ಕೇಳಿದೆ ಎಂದು ಜನ ಹೇಳುತ್ತಿದ್ದಾರೆ. ಶಿವಮೊಗ್ಗ ನಗರದಲ್ಲಿ ಹುಟ್ಟಿ ಬೆಳೆದರೂ ಈವರೆಗೆ ಇಂತಹ ಶಬ್ಧ ಕೇಳಿಲ್ಲವೆಂದರು.

ಅಕ್ರಮ ಗಣಿಗಾರಿಕೆ ಎಲ್ಲಾ ಕಡೆ ಇದೆ. ಅಕ್ರಮ ಗಣಿಗಾರಿಕೆ ವಿರುದ್ಧ ನಾವು ಕ್ರಮ ತೆಗೆದುಕೊಂಡಿದ್ದೆವು, ಇನ್ನೂ ಮುಂದೆಯೂ ಕ್ರಮ ಕೈಗೊಳ್ಳಲಿದ್ದೇವೆ. ಆದರೆ ಸ್ಫೋಟಕ್ಕೆ ಕಾರಣವೇನು ಎಂದು ತಿಳಿಯಬೇಕಿದೆ. ನಿನ್ನೆ ನಾನು ಊರಿನಲ್ಲಿ ಇರಲಿಲ್ಲ. ಬೆಂಗಳೂರಿನಿಂದ ಬಂದಿದ್ದೇನೆ. ನಮ್ಮನೆ ಕಿಟಕಿ ತೆಗೆದುಕೊಂಡಿತ್ತು. ಆಮೇಲೆ ಅನುಭವಕ್ಕೆ ಬಂದಿದೆ ಎಂದರು. (ಎಂ.ಎನ್)

Leave a Reply

comments

Related Articles

error: