ಕರ್ನಾಟಕನಮ್ಮೂರುಪ್ರಮುಖ ಸುದ್ದಿಮೈಸೂರು

ಕಣವಿ ಸಾಹಿತ್ಯ ಲೋಕದ ಭಂಡಾರ: ಕವಿ ಎಚ್.ಎಸ್.ವಿ ಬಣ್ಣನೆ

ಚೆನ್ನವೀರ ಕಣವಿಯವರ ಒಳ್ಳೆಯ ಗುಣ, ಭೂಮಿಯುದ್ದಕ್ಕೂ ಹರಡಿದ ಅವರ ವ್ಯಕ್ತಿತ್ವ  ಅವರನ್ನು ಅಷ್ಟು ಎತ್ತರಕ್ಕೆ ಕರೆದೊಯ್ದಿದೆ ಎಂದು ಕವಿ ಡಾ.ಎಚ್.ಎಸ್.ವೆಂಕಟೇಶ್ ಮೂರ್ತಿ ಹೇಳಿದರು.

ಜೆ.ಎಲ್.ಬಿ ರಸ್ತೆಯಲ್ಲಿನ ಇನ್ಸ್ ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಶುಕ್ರವಾರ ನಾಡೋಜ ಚನ್ನವೀರ ಕಣವಿಯವರ ‘ಹೂವು ಹೊರಳುವವು ಸೂರ್ಯನ ಕಡೆಗೆ’ ಕವನ ಸಂಕಲವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಕಣವಿಯವರು ಕನ್ನಡ ಸಾಹಿತ್ಯ ಜಗತ್ತು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾದ ಕವಿ. ಜಿ.ಎಸ್.ಶಿವರುದ್ರಪ್ಪ, ಕೆ.ಎಸ್.ನರಸಿಂಹಸ್ವಾಮಿ ಮತ್ತು ಚನ್ನವೀರ ಕಣವಿ ಈ ಮೂರು ರತ್ನಗಳನ್ನು ಕನ್ನಡ ಸಾಹಿತ್ಯ ಲೋಕ ಯಾವತ್ತೂ ಮರೆಯಲು ಸಾಧ್ಯವಿಲ್ಲ. ಅವರು ಸಾಹಿತ್ಯ ಲೋಕದ ಭಂಡಾರ ಎಂದು ಬಣ್ಣಿಸಿದರು. ಇವರ ವ್ಯಕ್ತಿತ್ವವೇ ಭಿನ್ನವಾಗಿದ್ದು ಹೊಸ ಜಗತ್ತಿಗೆ ಅವರ ಸಾಹಿತ್ಯ ತೆರೆದುಕೊಂಡಿದೆ ಎಂದರು.

ರಾಜಕಾರಣಿಗಳು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ವಿಶೇಷ. ಅವರೂ ಸಹ ಸಾಹಿತ್ಯ ಮತ್ತು ಕಲೆಯಲ್ಲಿ ಆಸಕ್ತಿ ವಹಿಸುವ ಅವಶ್ಯಕತೆ ಇದೆ. ಅವರಿಂದ ಸಾಹಿತಗಳನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದು ತಿಳಿಸಿದರು.

ಸಹಕಾರ ಮತ್ತು ಸಕ್ಕರೆ ಸಚಿವ ಮಹದೇವ ಪ್ರಸಾದ್, ಲೇಖಕರಾದ ಛಾಯಾಪತಿ, ಬಸಂತಕುಮಾರ್, ಮುಡಾ ಮಾಜಿ ಅಧ್ಯಕ್ಷ ಕೆ.ಆರ್.ಮೋಹನ್ ಕುಮಾರ್ ಉಪಸ್ಥಿತರಿದ್ದರು.

Leave a Reply

comments

Related Articles

error: