ಕರ್ನಾಟಕ

ತೆಂಗಿನಕಾಯಿಯಲ್ಲಿ ಮಾನವ ಕಣ್ಣಿನ ಆಕೃತಿ : ನೋಡಲು ಮುಗಿಬಿದ್ದ ಜನ

ತುಮಕೂರು: ಪ್ರಕೃತಿಯ ವಿಸ್ಮಯ ಅರಿತವರಾರು ಎನ್ನುವ ಮಾತಿಗೆ ಅನ್ವರ್ಥವೆಂಬಂತೆ ತೆಂಗಿನ ಕಾಯಿ ಮೇಲೆ ಮಾನವನ ಕಣ್ಣಿನ ಸ್ಪಷ್ಟ ಆಕೃತಿ ಮೂಡಿ ಎಲ್ಲರಲ್ಲೂ ಅಚ್ಚರಿ ಉಂಟು ಮಾಡಿದ್ದು, ಈ ವಿಸ್ಮಯ ನೊಡಲು ಜನರ ದಂಡು ಹರಿದು ಬರುತ್ತಿದೆ.

ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಕಡಬದಲ್ಲೊಂದು ಸುಲಿದ ತೆಂಗಿನ ಕಾಯಿಯಲ್ಲಿ ಮಾನವನ ಕಣ್ಣಿನ ಸ್ಪಷ್ಟ ಆಕೃತಿ ಒಡಮೂಡಿದ್ದು, ಇದು ಮುಕ್ಕಣ್ಣೆಶ್ವರ ಕಣ್ಣು ಎಂದು ಜನರು ಮಾತನಾಡುತ್ತಿದ್ದಾರೆ.

ಕಡಬ ವಾಸಿ ಉಮೇಶ್ ಎಂಬಾತ ಇಂದು ಕಾಯಿ ಸುಲಿದಾಗ ಅದರಲ್ಲಿ ಕಣ್ಣಿನ ಆಕೃತಿ ಕಂಡುಬಂದಿದೆ.

ಮುಕ್ಕಣ್ಣನ ಕಣ್ಣು ಹೊಂದಿರುವ ಕಾಯಿ ನೊಡಲು ಸಾಕಷ್ಟು ಜನ ಬರುತ್ತಿದ್ದಾರೆ.

(ಎಸ್‍.ಎನ್/ಎನ್‍.ಬಿ.ಎನ್)

Leave a Reply

comments

Related Articles

error: