ದೇಶಪ್ರಮುಖ ಸುದ್ದಿ

ಟೇಕ್ ಆಫ್ ವೇಳೆ ಲಘು ವಿಮಾನ ಅಪಘಾತ : ಫುಟ್ ಬಾಲ್ ಆಟಗಾರರು ಸಾವು

ದೇಶ(ನವದೆಹಲಿ)ಜ.25:- ಟೇಕ್ ಆಫ್ ವೇಳೆ ಲಘು ವಿಮಾನವೊಂದು ಅಪಘಾತಗೀಡಾಗಿದ್ದು, ವಿಮಾನದಲ್ಲಿದ್ದ ಫುಟ್ ಬಾಲ್ ಆಟಗಾರರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಲಘು ವಿಮಾನ ಬ್ರೆಜಿಲಿಯನ್ ಕಪ್ ಟೂರ್ನಿಯ ಪಂದ್ಯದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ತಂಡವನ್ನು ಕರೆದೊಯ್ಯಲು ಸಜ್ಜಾಗಿತ್ತು, ವಿಮಾನ ಟೇಕ್ ಆಫ್ ವೇಳೆ ಅಪಘಾತಕ್ಕೆ ಈಡಾಗಿದೆ. ಈ ವೇಳೆ ಪಲ್ಮಾಸ್ ಫುಟ್ ‌ಬಾಲ್ ಕ್ಲಬ್‌ನ ಅಧ್ಯಕ್ಷ ಮತ್ತು ನಾಲ್ವರು ಆಟಗಾರರು ಸಾವನ್ನಪ್ಪಿದ್ದಾರೆ. ಮೂಲಗಳ ಪ್ರಕಾರ ಕ್ಲಬ್ ಅಧ್ಯಕ್ಷ ಲೂಕಾಸ್‌ ಮೇರಾ, ಆಟಗಾರರಾದ ಲೂಕಾಸ್ ಪ್ರಕ್ಸಿಡಿಸ್‌, ಗುಲೆರ್ಮೆ ನೊಯೆ, ರಣುಲ್‌ ಮತ್ತು ಮಾರ್ಕಸ್ ಮೋಲಿನರಿ ಸಾವಿಗೀಡಾಗಿದ್ದಾರೆ ಎಂದು ಕ್ಲಬ್ ತಿಳಿಸಿದೆ. ದುರಂತದಲ್ಲಿ ಲಘು ವಿಮಾನದ ಪೈಲಟ್‌ ಕೂಡ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: