ದೇಶಪ್ರಮುಖ ಸುದ್ದಿ

ಗ್ಯಾಸ್ ಸಿಲಿಂಡರ್ ಬುಕ್ ಮಾಡುವವರಿಗೆ ಆಫರ್ ನೀಡಲು ಮುಂದಾದ ಪೇಟಿಎಂ ; ಈ ಆಫರ್ ಜ.31 ರವರೆಗೆ ಮಾತ್ರ

ದೇಶ(ನವದೆಹಲಿ)ಜ.25:- ಪೇಟಿಎಂ ತನ್ನ ಬಳಕೆದಾರರಿಗೆ ಉತ್ತಮ ಕೊಡುಗೆ ನೀಡಲು ಮುಂದಾಗಿದೆ. ಪೇಟಿಎಂ ಮೂಲಕ ಗ್ಯಾಸ್ ಸಿಲಿಂಡರ್ ನ ಮೊದಲ ಬುಕಿಂಗ್ ಮಾಡಿದ ಗ್ರಾಹಕರಿಗೆ 700 ರೂ.ಗಳವರೆಗೆ ಕ್ಯಾಶ್ ಬ್ಯಾಕ್ ನೀಡಲಾಗುತ್ತಿದೆ. ಪೇಟಿಎಂ ನ ಈ ಯೋಜನೆಯ ಬಗ್ಗೆ ಬಳಕೆದಾರರು ಬಹಳ ಉತ್ಸುಕರಾಗಿದ್ದಾರೆ.
700 ರೂ.ಗಳ ಕ್ಯಾಶ್ ಬ್ಯಾಕ್ ಎಂದರೆ ಅದು ಒಂದು ಸಿಲಿಂಡರ್ ತುಂಬುವ ವೆಚ್ಚಕ್ಕೆ ಸಮನಾಗಿರುತ್ತದೆ ಎಂದು ಹೇಳಲಾಗುತ್ತಿದೆ. ಲಖನೌದಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ 14.2 ಕೆ.ಜಿ.ಗೆ 732 ರೂ., ವಾರಣಾಸಿಯಲ್ಲಿ ಇದರ ಬೆಲೆ 754.50 ರೂ.
ಪ್ರಸ್ತಾಪದ ಪ್ರಕಾರ, ಎಲ್ಪಿಜಿ ಗ್ಯಾಸ್ ಸಿಲಿಂಡರ್ ಅನ್ನು ಕಾಯ್ದಿರಿಸುವ ಮೂಲಕ, ಬಳಕೆದಾರರು ಸಿಲಿಂಡರ್ ನ್ನು ಉಚಿತವಾಗಿ ಖರೀದಿಸಬಹುದು. ಗ್ರಾಹಕರು ಈ ಆಫರ್ ನ್ನು ಬಳಸಿಕೊಂಡಲ್ಲಿ ಒಂದು ಸಿಲಿಂಡರ್ ತುಂಬಿಸುವ ಹಣವನ್ನು ಸುಲಭವಾಗಿ ಉಳಿಸಬಹುದಾಗಿದೆ. ಈ ಕೊಡುಗೆ ಜನವರಿ 31 ರವರೆಗೆ ಮಾತ್ರ.
ಈ ಕೊಡುಗೆಯ ಲಾಭ ಪಡೆಯಲು, ನೀವು ಮೊದಲು ಎಲ್ಪಿಜಿ ಪ್ರೋಮೋ ಕೋಡ್ ಅನ್ನು ಅನ್ವಯಿಸಬೇಕಾಗುತ್ತದೆ. ನಿಮ್ಮ ಕೋಡ್ ಅನ್ನು ನಮೂದಿಸಿದ ನಂತರ ಗ್ಯಾಸ್ ಸಿಲಿಂಡರ್ ಮತ್ತು ಕ್ಯಾಶ್ಬ್ಯಾಕ್ ಸೌಲಭ್ಯವು ಸುಲಭವಾಗಿ ಲಭ್ಯವಿರುತ್ತದೆ. ಅದೇ ವೇಳೆ ಕೋಡ್ ಇಲ್ಲದೆ ನೀವು ಅದರ ಲಾಭವನ್ನು ಪಡೆಯಲು ಸಾಧ್ಯವಿಲ್ಲ.
ನಿಮ್ಮ ಬುಕಿಂಗ್ ಮೊತ್ತ 500 ಅಥವಾ ಹೆಚ್ಚಿನದಾದರೆ ಮಾತ್ರ ಆಫರ್ ಲಭ್ಯವಾಗಲಿದೆ. ಅಷ್ಟೇ ಅಲ್ಲದೆ ಪ್ರಮುಖವಾಗಿ ಮೊದಲ ಬಾರಿಗೆ ಗ್ಯಾಸ್ ಸಿಲಿಂಡರ್ ಗಳನ್ನು ಕಾಯ್ದಿರಿಸುವ ಗ್ರಾಹಕರು ಮಾತ್ರ ಈ ಆಫರ್ ನ ಲಾಭವನ್ನು ಪಡೆಯಬಹುದು ಎಂದು ಮಾಧ್ಯಮವೊಂದು ವರದಿ ಮಾಡಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: