ಮೈಸೂರು

ನಾಳೆ ಗಣರಾಜ್ಯೋತ್ಸವ ಆಚರಣೆ ಹಿನ್ನೆಲೆ: ಪೊಲೀಸ್ ಇಲಾಖೆಯಿಂದ ಪರೇಡ್ ತಾಲೀಮು

ಮೈಸೂರು,ಜ.25-ನಾಳೆ ಗಣರಾಜ್ಯೋತ್ಸವ ಆಚರಣೆಯನ್ನು ನಗರದ ಬನ್ನಿಮಂಟಪದ ಪಂಜಿನ ಕವಾಯಿತು ಮೈದಾನದಲ್ಲಿ ಆಚರಿಸಲಾಗುತ್ತಿದೆ. ಅದಕ್ಕಾಗಿ ಪೊಲೀಸ್ ಇಲಾಖೆಯಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಗಣರಾಜ್ಯೋತ್ಸವ ಆಚರಣೆಯಲ್ಲಿ ನಡೆಸಲಾಗುವ ಪರೇಡ್ ನ ತಾಲೀಮು ಅನ್ನು ಇಂದು ಬನ್ನಿಮಂಟಪದ ಮೈದಾನದಲ್ಲಿ ನಡೆಸಲಾಯಿತು. ಅಶ್ವರೋಹಿದಳ, ನಗರ ಸಶಸ್ತ್ರ ಮೀಸಲು ಪಡೆ, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ನಗರ ನಾಗರಿಕ ಪೊಲೀಸ್ ಪಡೆ, ನಗರ ಸಂಚಾರ ಪಡೆ, ಮಹಿಳಾ ಪಡೆ, ಗೃಹ ರಕ್ಷಕ ದಳ, ಕರ್ನಾಟಕ ರಾಜ್ಯ ಮೀಸಲು ಪಡೆಯವರು ನಾಳೆ ನಡೆಯುವ ಪರೇಡ್ ಗಾಗಿ ಪೂರ್ವಭಾವಿ ತಾಲೀಮು ನಡೆಸಿದರು.

ತಾಲೀಮು ವೀಕ್ಷಿಸಿದ ಬಳಿಕ ಮಾತನಾಡಿದ ಡಿಸಿಪಿ ಪ್ರಕಾಶ್ ಗೌಡ ಅವರು, ನಾಳೆ 72ನೇ ಗಣ್ಯರಾಜ್ಯೋತ್ಸವ ಪ್ರಯುಕ್ತವಾಗಿ ತಾಲೀಮು ಮಾಡಿದ್ದೇವೆ. ಈ ಬಾರಿ ಪರೇಡ್ ನಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಜೊತೆಗೆ ಕೆಲವು ತಂಡಗಳನ್ನು ಕಡಿಮೆ ಮಾಡಿದ್ದೇವೆ. ಅವರಿಗೆ ಅವಕಾಶವಿರುವುದಿಲ್ಲ. ಅಧಿಕಾರ ವರ್ಗ, ಸಾರ್ವಜನಿಕರಿಗೆ ಪ್ರತ್ಯೇಕ ಸ್ಥಳವನ್ನು ನಿಗದಿ ಮಾಡಲಾಗಿದೆ. ಸಾರ್ವಜನಿಕರು ಬೇಗ ಬಂದು ನಿಗದಿಪಡಿಸಿರುವ ಸ್ಥಳದಲ್ಲಿ ಕುಳಿತುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಮೈಸೂರು ಗ್ರಾಮಾಂತರ ಹೆಚ್ಚುವರಿ ಎಸ್ಪಿ ಶಿವಕುಮಾರ್, ಸಿಆರ್ ಡಿಸಿಪಿ ಶಿವರಾಜ್, ಎನ್ ಆರ್ ಎಸಿಪಿ ಶಿವಶಂಕರ್, ಮೌಟೆಂಡ್ ಕಮಾಡೆಂಟ್ ನಾಗರಾಜ್ ಇತರರು ಇದ್ದರು.

ನಾಳೆ ನಡೆಯಲಿರುವ ಪರೇಡ್ ನಲ್ಲಿ ಪ್ರಧಾನ ದಳಪತಿಯಾಗಿ ಸುರೇಶ್ ಡಿವೈಎಸ್ಪಿ (ಮೌಂಟೆಂಡ್), ಸಹಾಯಕ ಪ್ರಧಾನ ದಳಪತಿಯಾಗಿ ಎಸ್.ಡಿ.ಸಾಸನೂರ (ಆರ್ ಪಿಐ) ಇರಲಿದ್ದು, ಅಶ್ವರೋಹಿದಳ ತಂಡವನ್ನು ನಿಂಗಪ್ಪ, ನಗರ ಸಶಸ್ತ್ರ ಮೀಸಲು ಪಡೆಯನ್ನು ಪಿ.ಸುರೇಶ್, ಜಿಲ್ಲಾ ಸಶಸ್ತ್ರ ಮೀಸಲು ಪಡೆಯನ್ನು ಡಿ.ರಮೇಶ್, ನಗರ ನಾಗರೀಕ ಪೊಲೀಸ್ ಪಡೆಯನ್ನು ಇರ್ಷಾದ್, ನಗರ ಸಂಚಾರ ಪಡೆಯನ್ನು ಎನ್.ಕೆ.ಭವ್ಯ, ಮಹಿಳಾ ಪಡೆಯನ್ನು ಎಂ.ರಾಧೆ, ಗೃಹ ರಕ್ಷಕ ದಳವನ್ನು ಡಿ.ಶಿವಣ್ಣ, ಕರ್ನಾಟಕ ರಾಜ್ಯ ಮೀಸಲು ಪಡೆಯನ್ನು ವಸಂತಕುಮಾರ್ ಅವರನ್ನು ಮುನ್ನಡೆಸಲಿದ್ದಾರೆ.

 

ಬ್ಯಾಂಡ್ ತಂಡವನ್ನು ಸಿಎಆರ್ ಎಂ.ಅಂಥೋಣಿ, ಕೆಎಸ್ಆರ್ ಪಿ ಸತ್ಯ ನಾಗರಾಜು, ಡಿಎಆರ್ ಎಂ.ಸೋಮಶೇಖರ್ ಮುನ್ನಡೆಸಲಿದ್ದಾರೆ. ವರುಣಾ ಪೊಲೀಸ್ ಠಾಣೆಯ ಲಕ್ಷ್ಮಿ, ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯ ನಂದಿನಿ, ಎಐಆರ್ ಜಿ.ಎನ್.ಮಂಜುನಾಥ್ ವ್ಯಾಖ್ಯಾನಕಾರರಾಗಿದ್ದಾರೆ. (ಎಚ್.ಎನ್, ಎಂ.ಎನ್)

 

Leave a Reply

comments

Related Articles

error: