ಮೈಸೂರು

ರೋಟರಿ ಐವರಿ ಸಿಟಿ ಮೈಸೂರು ಇ-ಲರ್ನಿಂಗ್ ಕಾರ್ಯಾಗಾರ

ಮೈಸೂರು,ಜ.25:- ರೋಟರಿ ಐವರಿ ಸಿಟಿ ಮೈಸೂರು ಇತ್ತೀಚೆಗೆ ಕೃಷ್ಣಮೂರ್ತಿಪುರದ ವನಿತಾ ಸದನಾ ಶಾಲೆಯಲ್ಲಿ ಶಾಲಾ ಶಿಕ್ಷಕರಿಗೆ ಎಕ್ಸೆಲ್ಸಾಫ್ಟ್ ತಂತ್ರಜ್ಞರ ತಾಂತ್ರಿಕ ಬೆಂಬಲದೊಂದಿಗೆ ಇ-ಲರ್ನಿಂಗ್ ಕಾರ್ಯಾಗಾರವನ್ನು ಆಯೋಜಿಸಿತ್ತು.
6 ಶಾಲೆಗಳ 31 ಶಿಕ್ಷಕರು ಭಾಗವಹಿಸಿದ್ದರು. ಶ್ರೀ ಸತ್ಯಸಾಯಿ ಬಾಬಾ ಶಾಲೆ, ACME ಶಾಲೆ, ಹಾರ್ಡ್ವಿಕ್ ಪ್ರೌಡ ಶಾಲೆ, ಶ್ರೀ ಭವಾನಿ ಸ್ವಾಮಿ ಶಾಲೆಯ ಶಿಕ್ಷಕರು, ಸರ್ಕಾರಿ ಪ್ರೌಡ ಶಾಲೆ, ಮಾದಾಪುರ, ಎಚ್.ಡಿ.ಕೋಟೆ ಮತ್ತು ವನಿತಾ ಸದನ ಶಾಲೆ ಶಿಕ್ಷಕರುಗಳು ಭಾಗವಹಿಸಿದ್ದರು. (ಇ-ಲರ್ನಿಂಗ್) ಫೌಂಡೇಶನ್ ಫಾರ್ ರಿಸರ್ಚ್ ಇನ್ ಹೆಲ್ತ್ ಸಿಸ್ಟಮ್ಸ್ ನಿರ್ದೇಶಕ ಡಾ. ಜಿ. ಎಲ್. ಶೇಖರ್ ಅವರು ಕಾರ್ಯಾಗಾರವನ್ನು ಉದ್ಘಾಟಿಸಿ ಕಾರ್ಯಾಗಾರದ ಉದ್ದೇಶವನ್ನು ವಿವರಿಸಿದರು.
ಸಂಜು ಎಸ್.ನಾಯರ್, ಜ್ಞಾನೇಶ್ವರ, ಜಿತೇಶ್ ಬಾಬು ಮತ್ತು ಮಧುಸೂದನ ವರ್ಮಾ ಅವರು ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ರೋಟರಿ ಐವರಿ ಸಿಟಿಯ ಅಧ್ಯಕ್ಷ ರೋಟರಿಯನ್ ಬಿ. ಹರೀಶ್ ಅಧ್ಯಕ್ಷತೆ ವಹಿಸಿದ್ದರು. ವನಿತಾ ಸದನದ ರವಿ ಗೌರವ ಅತಿಥಿಯಾಗಿ ಭಾಗವಹಿಸಿದ್ದರು. ಕ್ಲಬ್ ನ ಕಾರ್ಯದರ್ಶಿ ಡಾ.ಎಂ.ಕೆ.ಸಚಿದಾನಂದನ್ ಮತ್ತು ಹಲವಾರು ರೋಟರಿಯನ್ನರು, ವನಿತಾ ಸದನದ ಹಲವಾರು ಟ್ರಸ್ಟಿಗಳು ಉಪಸ್ಥಿತರಿದ್ದರು. ಭಾಗವಹಿಸಿದ ಶಿಕ್ಷಕರಿಗೆ ಪ್ರಮಾಣಪತ್ರ ನೀಡಲಾಯಿತು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: