ಕರ್ನಾಟಕಪ್ರಮುಖ ಸುದ್ದಿ

ತರಗತಿವಾರು ಕಲಿಕಾ ಸೂಚಕ : ಸಾರ್ವಜನಿಕರಿಂದ ಸೂಕ್ತ ಸಲಹೆ ಸೂಚನೆಗೆ ಆಹ್ವಾನ

ಬೆಂಗಳೂರು : ಪೋಷಕರು ತಮ್ಮ ಮಕ್ಕಳು ಆಯಾ ತರಗತಿಯಲ್ಲಿ ವಿವಿಧ ವಿಷಯಗಳಲ್ಲಿ ಕಲಿಯಬೇಕಾದ ಪ್ರಮುಖ ಅಂಶಗಳನ್ನು ತಿಳಿದುಕೊಳ್ಳುವ ಸಲುವಾಗಿ 1 ರಿಂದ 5 ನೇ ತರಗತಿಯವರೆಗೆ ಎನ್.ಸಿ.ಇ.ಆರ್.ಟಿ. ಕಲಿಕಾ ಫಲಿತಾಂಶಗಳು ಹಾಗೂ ರಾಜ್ಯ ಪಠ್ಯಕ್ರಮವನ್ನು ಗಮನದಲ್ಲಿಟ್ಟುಕೊಂಡು ತರಗತಿವಾರು, ವಿಷಯವಾರು ಸಂಕ್ಷಿಪ್ತ ಕಲಿಕಾ ಸೂಚಕಗಳನ್ನು ಸಿದ್ಧಪಡಿಸಲಾಗಿದೆ. ಇವುಗಳ ಮಾಹಿತಿ www.dsert.kar.nic.in ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು, ಇವುಗಳ ಬಗ್ಗೆ ಶಿಕ್ಷಣಾಸಕ್ತರು/ಪೋಷಕರು/ಸಾರ್ವಜನಿಕರು ಸೂಕ್ತ ಸಲಹೆ ಸೂಚನೆಗಳಿದ್ದಲ್ಲಿ [email protected] ಅಥವಾ ನಿರ್ದೇಶಕರು ಡಿ.ಎಸ್.ಇ.ಆರ್.ಟಿ. ನಂ 4, 100 ಅಡಿ ರಿಂಗ್ ರೋಡ್, ಬನಶಂಕರಿ, 3ನೇ ಹಂತ, ಬೆಂಗಳೂರು – 85 ಇವರಿಗೆ ಏಪ್ರಿಲ್ 20 ರೊಳಗೆ ಒದಗಿಸಲು ಕೋರಿದೆ.

(ಎನ್‍.ಬಿ.ಎನ್‍)

Leave a Reply

comments

Related Articles

error: