
ಮೈಸೂರು
ಗೌರಿಕಾ ಅವರಿಗೆ ಮುಖ್ಯಮಂತ್ರಿಗಳ ಪ್ರಶಂಸಾ ಪ್ರಶಸ್ತಿ
ಮೈಸೂರು,ಜ.25:- ಎಸ್ ಬಿ ಆರ್ ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಬಿಎ ಅಂತಿಮ ವರ್ಷದ ವಿದ್ಯಾರ್ಥಿನಿ ಕೆಡೆಟ್ ಸಾರ್ಜೆಂಟ್ ಗೌರಿಕಾ ಅವರಿಗೆ ಮುಖ್ಯಮಂತ್ರಿಗಳ ಪ್ರಶಂಸಾ ಪ್ರಶಸ್ತಿಯನ್ನು ಮೈಸೂರು ಗ್ರೂಪ್ ಎನ್ಸಿಸಿಯ ಗ್ರೂಪ್ ಕಮಾಂಡರ್ ಕರ್ನಲ್ ಪಿ ಟಿ ರಾಜೀವ್ ನೀಡಿದರು.
ಪ್ರಸ್ತುತ ಸಮಾರಂಭದಲ್ಲಿ, ಲೆಫ್ಟಿನೆಂಟ್ ವಿಶಾಲ್ ಮಿಶ್ರಾ, ಎಎನ್ ಒನ ಡಾ.ಎಲ್.ಟಿ.ಇಂದ್ರಾಣಿ ಎಂ ಆರ್, ಡಾ.ಎಲ್.ಟಿ.ಶಿವಕುಮಾರ್, ಪಿಐ ಸಿಬ್ಬಂದಿ ಮತ್ತು ಕೆಡೆಟ್ ಗಳು ಉಪಸ್ಥಿತರಿದ್ದರು. ಕಾಲೇಜು ಪ್ರಾಂಶುಪಾಲರು, ಅಧ್ಯಾಪಕ ವೃಂದ ಕೆಡೆಟ್ ಸಾರ್ಜೆಂಟ್ ಗೌರಿಕಾ ಅವರ ಸಾಧನೆಗೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದು ಅಭಿನಂದಿಸಿದ್ದಾರೆ. (ಜಿ.ಕೆ,ಎಸ್.ಎಚ್)