ದೇಶಪ್ರಮುಖ ಸುದ್ದಿ

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಸಿಆರ್ ಪಿಎಫ್ ಎಎಸ್‌ಐ ಮೋಹನ್ ಲಾಲ್ ಗೆ ಮರಣೋತ್ತರ ರಾಷ್ಟ್ರಪತಿಗಳ ಪೊಲೀಸ್ ಪದಕ

ನವದೆಹಲಿ,ಜ.25-ಪುಲ್ವಾಮಾ ದಾಳಿ ಸಂದರ್ಭದಲ್ಲಿ ಸ್ಫೋಟಕ ತುಂಬಿದ ಉಗ್ರರ ಕಾರು ಬೆನ್ನಟ್ಟಿ ಗುಂಡು ಹಾರಿಸಿದ್ದ ಸಿಆರ್ ಪಿಎಫ್ ಸಹಾಯಕ ಸಬ್ ಇನ್ಸ್‌ಪೆಕ್ಟರ್(ಎಎಸ್‌ಐ) ಮೋಹನ್ ಲಾಲ್ ಅವರಿಗೆ ಮರಣೋತ್ತರವಾಗಿ ಅತ್ಯುನ್ನತ ಪೊಲೀಸ್ ಗೌರವವಾದ ರಾಷ್ಟ್ರಪತಿಗಳ ಪೊಲೀಸ್ ಪದಕ ನೀಡಿ ಗೌರವಿಸಲಾಗುತ್ತಿದೆ.

ಕೇಂದ್ರ ಗೃಹ ಸಚಿವಾಲಯ ಇಂದು ಪ್ರಕಟಿಸಿದ ಪಟ್ಟಿಯ ಪ್ರಕಾರ, ಈ ವರ್ಷ ಒಟ್ಟು 207 ಪೊಲೀಸ್ ಪದಕಗಳು ಮತ್ತು 89 ರಾಷ್ಟ್ರಪತಿಗಳ ಪೊಲೀಸ್ ಪದಕ ಹಾಗೂ ಶ್ರೇಷ್ಠ ಸೇವೆಗಾಗಿ 650 ಪೊಲೀಸ್ ಪದಕಗಳನ್ನು ನೀಡಲಾಗುತ್ತಿದೆ.

ಶೌರ್ಯ ಪ್ರದರ್ಶನಕ್ಕಾಗಿ ಇಬ್ಬರಿಗೆ ಮಾತ್ರ ಸಿಆರ್‌ಪಿಎಫ್‌ನ ಮೋಹನ್ ಲಾಲ್ ಮತ್ತು ಹುತಾತ್ಮ ಜಾರ್ಖಂಡ್ ಪೊಲೀಸ್ ಎಎಸ್‌ಐ ಬಾನುವಾ ಒರಾನ್ ಅವರಿಗೆ ರಾಷ್ಟ್ರಪತಿಗಳ ಪೊಲೀಸ್ ಪದಕ(ಪಿಪಿಎಂಜಿ) ನೀಡಲಾಗಿದೆ.

2019ರ ಫೆಬ್ರವರಿ 14 ರಂದು ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ 40 ಸಿಆರ್ ಪಿಎಫ್ ಹುತಾತ್ಮರಾಗಿದ್ದರು. ಈ ವೇಳೆ ಸಿಆರ್ ಪಿಎಫ್ ರಸ್ತೆ ತೆರೆಯುವ ಪಿಕೆಟ್ ಕಮಾಂಡರ್ 50 ವರ್ಷದ ಎಎಸ್‌ಐ ಮೋಹನ್ ಲಾಲ್ ಅವರು ಸ್ಫೋಟಕ ತುಂಬಿದ ಉಗ್ರರ ಕಾರು ಬೆನ್ನಟ್ಟಿ ಗುಂಡು ಹಾರಿಸಿದ್ದರು. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: