ಮೈಸೂರು

ಕನ್ನಡ ಜಾಗೃತಿ ಸಮಿತಿಯ ಸಭೆ

ಮೈಸೂರು,ಜ.25:- ಇಂದು ಮೈಸೂರು ಮಹಾನಗರ ಪಾಲಿಕೆಯ ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ಉಪ ಆಯುಕ್ತರಾದ ಎನ್.ಎಂ ಶಶಿಕುಮಾರ್ ಅವರ ನೇತೃತ್ವದಲ್ಲಿ ಕನ್ನಡ ಜಾಗೃತಿ ಸಮಿತಿಯ ಸಭೆ ನಡೆಯಿತು.
ಸಭೆಗೂ ಮುನ್ನ ನಗರ ಪಾಲಿಕೆ ಕನ್ನಡ ಜಾಗೃತಿ ಸಮಿತಿಗೆ ಸದಸ್ಯ ಕಾರ್ಯದರ್ಶಿಯಾಗಿದ್ದ ನಗರ ಪಾಲಿಕೆ ಉಪ ಆಯುಕ್ತರು ಕಂದಾಯ ಟಿ.ಬಿ ಕುಮಾರ್ ನಾಯಕ್ ಅವರ ಅಗಲಿಕೆಗೆ ಸಂತಾಪ ಸೂಚಿಸಿ ನಂತರ ಸಭೆ ನಡೆಸಲಾಯಿತು.

ಈ ಸಭೆಯಲ್ಲಿ ಕ.ಸಾ.ಪ ಅಧ್ಯಕ್ಷರಾದ ಡಾ.ವೈ.ಡಿ.ರಾಜಣ್ಣ,ಮೈಸೂರು ಮಹಾನಗರ ಪಾಲಿಕೆಯ ಕನ್ನಡ ಜಾಗೃತಿ ಸಮಿತಿಯ ಸದಸ್ಯರಾದ ಎ.ಎಸ್ ನಾಗರಾಜ್ , ಅರವಿಂದ್ ಶರ್ಮ , ಸಾತನೂರು ದೇವರಾಜ್ , ಎನ್.ಜಿ ಗಿರೀಶ್ , ಡಾ. ಸೌಗಂಧಿಕಾ ಜೋಯಿಸ್ , ಡಾ.ಮುಳ್ಳೂರು ನಂಜುಂಡಸ್ವಾಮಿ
ಮತ್ತುವವಲಯ ಕಚೇರಿ 8 ರ ಆಯುಕ್ತರಾದ ಕುಬೇರಪ್ಪ ,ವಲಯ 7 ಆಯುಕ್ತರಾದ
ನಂಜುಡಯ್ಯ ,ವಲಯ 5 ರ ಆಯುಕ್ತರಾದ ಕೆ.ಕೃಷ್ಣ , ವಲಯ ಕಛೇರಿ 9 ರ ಆಯುಕ್ತರಾದ
ಎಸ್.ಬಿ ವೆಂಕಟೇಶ್ , ವಲಯ ಕಚೇರಿ 2ರ ಕಂದಾಯ ಅಧಿಕಾರಿಗಳಾದ ಅರಸು ಕುಮಾರಿ , ವಲಯ ಕಚೇರಿ 6 ರ ಕಂದಾಯ ಅಧಿಕಾರಿ ಆಶಾ ಜೆ ಮತ್ತು ಮಹಾನಗರ ಪಾಲಿಕೆ ಕಂದಾಯ ಶಾಖೆಯ ಸಹಾಯಕರಾದ ಎಂ.ಕೆ ಮೋಹನ ಮತ್ತು ಕಂದಾಯ ಶಾಖೆ ವಿಷಯ ನಿರ್ವಾಹಕರಾದ
ನಾಗಲಕ್ಷ್ಮಿ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: