ಮೈಸೂರು

ಪ್ರಥಮ ಸ್ಥಾನ ಮುಡಿಗೇರಿಸಿಕೊಂಡ ಸೈಬೀರಿಯನ್ ಹಸ್ಕಿ

ಮುಂದೆ ನಡೆ, ಕುಳಿತುಕೋ, ಓಡು ಎಂಬಿತ್ಯಾದಿ ತಮ್ಮ ಒಡೆಯನ ಮಾತುಗಳನ್ನು ಕಣ್ಣಿನ ಸನ್ನೆಗಳಲ್ಲೇ ಅರ್ಥ ಮಾಡಿಕೊಂಡು ಪುಟಿಯುತ್ತಿದ್ದ ಶ್ವಾನಗಳು ಕಂಡು ಬಂದಿದ್ದು ಮೈಸೂರಿನ ಗೋಕುಲಂನಲ್ಲಿರುವ ವಿದ್ಯಾವರ್ಧಕ ಕಾಲೇಜಿನಲ್ಲಿ ನಡೆದ  ವಿದ್ಯುತ್ -2017ರ ಕಾರ್ಯಕ್ರಮದ ಶ್ವಾನ ಪ್ರದರ್ಶನದಲ್ಲಿ.

ಮಿನಿಎಚ್ಚರ್, ಜರ್ಮನ್ ಷೆಫರ್ಡ್, ಲ್ಯಾಬರ್ ಡಾಗ್, ಗೋಲ್ಡನ್ ರಿಟ್‍ರಿವರ್, ಅಮೇರಿಕನ್ ಪಿಟ್‍ಬುಲ್, ಡಾಬರ್ ಮೆನ್, ಗ್ರೇಡ್ ಡೇನ್, ಬಾಕ್ಸರ್, ಪಗ್, ಸೈಬಿರಿಯನ್ ಹಸ್ಕಿ ಸೇರಿದಂತೆ ವಿವಿಧ ತಳಿಗಳ ಶ್ವಾನಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಗಮನ ಸೆಳೆದವು. ಕೆಲವರು ತಮ್ಮ ಪುಟ್ಟ ಕ್ಯಾಮರಾಗಳಲ್ಲಿ ಶ್ವಾನಗಳ ಚಿತ್ರವನ್ನು ಸೆರೆಹಿಡಿಯುತ್ತಿರುವುದು ಕಂಡು ಬಂತು. ಮೈಸೂರು ಸೇರಿದಂತೆ ವಿವಿಧೆಡೆಗಳಿಂದ ಆಗಮಿಸಿದ ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು.

ಈ ಶ್ವಾನ ಪ್ರದರ್ಶನದಲ್ಲಿ ವಿದ್ಯಾಶ್ರಮದ ಚೇರಮನ್  ಕೆ.ರಾಕೇಶ್ ರಾಜೇ ಅರಸ್ ಅವರ ಮಾಲೀಕತ್ವದ ಸೈಬೀರಿಯನ್ ಹಸ್ಕಿ ತಳಿಯ ಶ್ವಾನ ಪ್ರಥಮ ಬಹುಮಾನವನ್ನು ತನ್ನ ಮುಡಿಗೇರಿಸಿಕೊಂಡಿದೆ.   ಮಾಲೀಕ ಶಿವು ಎಂಬವರ ಮಾಲೀಕತ್ವದ ಗೋಲ್ಡನ್ ರಿಟ್ರೀವರ್ ಶ್ವಾನ ದ್ವಿತೀಯ ಬಹುಮಾನ ಪಡೆದುಕೊಂಡರೆ,   ಮಾಲೀಕ ಮಂಜಣ್ಣ ಎಂಬವರ ಮಾಲೀಕತ್ವದ  ಡಾಬರ್ ಮನ್ ತೃತೀಯ  ಬಹುಮಾನ ಪಡೆದುಕೊಂಡಿದೆ. ಒಟ್ಟಿನಲ್ಲಿ ಬಿಂಕ, ಬಿನ್ನಾಣ, ವೈಯ್ಯಾರಗಳಿಂದ ಹೆಜ್ಜೆಯಿಟ್ಟ ಶ್ವಾನಗಳ ಪ್ರದರ್ಶನ ಅಲ್ಲಿ ನೆರೆದವರ ಚಿತ್ತವನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿತ್ತು.

Leave a Reply

comments

Related Articles

error: