ದೇಶಪ್ರಮುಖ ಸುದ್ದಿ

ಭಾರತೀಯ ವಾಯುಪಡೆಯ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಸಾಕ್ಷಿಯಾದ ಪೈಲಟ್ ಭಾವನಾ ಕಾಂತ್

ದೇಶ( ನವದೆಹಲಿ)ಜ.26:- ಇಂದು ದೇಶದ ಮೂವರು ಮಹಿಳಾ ಯುದ್ಧ ಪೈಲಟ್ ಗಳಲ್ಲಿ ಒಬ್ಬರಾದ ಲೆಫ್ಟಿನೆಂಟ್ ಭಾವನಾ ಕಾಂತ್ 72ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಜಪಥ್ ನಲ್ಲಿ ನಡೆದ ಭಾರತೀಯ ವಾಯುಪಡೆಯ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಸಾಕ್ಷಿಯಾದರು.

ಭಾರತೀಯ ವಾಯುಪಡೆ ಹಗುರ ಯುದ್ಧವಿಮಾನ, ಹಗುರ ಯುದ್ಧ ಹೆಲಿಕಾಪ್ಟರ್ ಮತ್ತು ಸುಕೊಯ್-30 ಯುದ್ಧ ವಿಮಾನಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಭಾವನಾ ಕಾಂತ್ ಬಿಹಾರದ ದರ್ಬಾಂಗ್ ನವರು. 140 ವಾಯು ರಕ್ಷಣಾ ರೆಜಿಮೆಂಟ್ ನ ಸುಧಾರಿತ ಸ್ಚಿಲ್ಕ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಕ್ಯಾಪ್ಟನ್ ಪ್ರೀತಿ ಚೌಧರಿ ಮುನ್ನಡೆಸಿದ್ದಾರೆ. ಇಂದು ಪಥಸಂಚಲನದಲ್ಲಿ ಭಾಗವಹಿಸಿದ ಏಕೈಕ ಮಹಿಳಾ ರೆಜಿಮೆಂಟ್ ಕಮಾಂಡರ್ ಕ್ಯಾಪ್ಟನ್ ಪ್ರೀತಿ ಚೌಧರಿ ಆಗಿದ್ದಾರೆ. ಇಂದು ಮಹಿಳೆಯರು ಕೂಡ ದೇಶದ ಮಿಲಿಟರಿಯ ಮೂರೂ ಪಡೆಗಳಲ್ಲಿ ತಮ್ಮ ಶಕ್ತಿ, ಸಾಮರ್ಥ್ಯ, ಪ್ರತಿಭೆಯನ್ನು ತೋರಿಸುತ್ತಿದ್ದಾರೆ. ರಾಜಪಥ್ ನಲ್ಲಿ ನಡೆದ ಪರೇಡ್ ನಲ್ಲಿ ಎನ್ ಸಿಸಿ ಹೆಣ್ಣುಮಕ್ಕಳು ಮಹಾರಾಷ್ಟ್ರದ ಎನ್ ಸಿಸಿ ನಿರ್ದೇಶನಾಲಯದ ಹಿರಿಯ ಅಧೀನ ಅಧಿಕಾರಿ ಸಮೃದ್ಧಿ ಹರ್ಷಲ್ ಸಂತ್ ನೇತೃತ್ವದಲ್ಲಿ ಪಥ ಸಂಚಲನ ಸಾಗಿದ್ದು ಕಂಡು ಬಂತು.

Leave a Reply

comments

Related Articles

error: