ಪ್ರಮುಖ ಸುದ್ದಿವಿದೇಶ

ವಿದೇಶಾಂಗ ಕಾರ್ಯದರ್ಶಿಯಾಗಿ ಆ್ಯಂಟೊನಿ ಬ್ಲಿಂಕೆನ್‌ ಆಯ್ಕೆ

ವಿದೇಶ( ವಾಷಿಂಗ್ಟನ್‌)ಜ.27:- ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅವರಿಗೆ ಹಲವು ವರ್ಷಗಳಿಂದ ಸಹಾಯಕರಾಗಿದ್ದ ಆ್ಯಂಟೊನಿ ಬ್ಲಿಂಕೆನ್‌ ಅವರು ಮುಂದಿನ ವಿದೇಶಾಂಗ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದು, ಅಮೆರಿಕದ ಸೆನೆಟ್‌ ಖಚಿತಪಡಿಸಿದೆ.

58 ವರ್ಷದ ಬ್ಲಿಂಕೆನ್‌ ಗೆ 78 ಸೆನೆಟರ್‌ ಗಳು ಬೆಂಬಲ ನೀಡಿದ್ದು, ಬೈಡನ್‌ ಅವರ ಸಂಪುಟಕ್ಕೆ ಸೇರ್ಪಡೆಯಾಗುತ್ತಿರುವ ನಾಲ್ಕನೇ ಸದಸ್ಯರಾಗಿದ್ದಾರೆ. ಶೀಘ್ರದಲ್ಲೇ ಅವರು ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ. 22 ಸೆನೆಟರ್‌ ಗಳು ಬ್ಲಿಂಕೆನ್‌ ವಿರುದ್ಧ ಮತ ಚಲಾಯಿಸಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: