ಪ್ರಮುಖ ಸುದ್ದಿಮನರಂಜನೆ

ಪ್ರಥಮ ಬಾರಿಗೆ ಟಿವಿ ಕಾರ್ಯಕ್ರಮವೊಂದರಲ್ಲಿ ಅಣ್ಣಾ ಹಜಾರೆ

dsc_0026_092416061342-webಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ವಿಭಿನ್ನ ಮಾದರಿಯಲ್ಲಿ ಪ್ರಥಮ ಬಾರಿಗೆ ಟಿವಿ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಜೀವನಚರಿತ್ರೆ ಆಧಾರಿತ “ಅಣ್ಣಾ: ಕಿಸಾನ್ ಬಾಬುರಾವ್ ಹಜಾರೆ” ಚಲನಚಿತ್ರ ಪ್ರಚಾರಕ್ಕಾಗಿ ಜನಪ್ರಿಯ ಹಾಸ್ಯ ಶೋ “ದಿ ಕಪಿಲ್ ಶರ್ಮ ಶೋ”ಗೆ ಆಗಮಿಸಿದ್ದು, ಕಾರ್ಯಕ್ರಮದ ಶೂಟಿಂಗ್‍ ಈಗಾಗಲೇ ಮುಗಿದಿದೆ. ಈ ಎಪಿಸೋಡ್‍ ಅ.1ರಂದು ಸೋನಿ ಚಾನೆಲ್‍ನಲ್ಲಿ ಪ್ರಸಾರವಾಗಲಿದೆ.

130 ನಿಮಿಷಗಳ ‘ಅಣ್ಣಾ: ಕಿಸಾನ್ ಬಾಬುರಾವ್ ಹಜಾರೆ’ ಚಲನಚಿತ್ರದ ಚಿತ್ರೀಕರಣವು ಅಹ್ಮದ್‍ನಗರದ ರಲೇಗಾನ್ ಸಿದ್ದಿ, ಮುಂಬೈ, ಜಮ್ಮು-ಕಾಶ್ಮೀರ, ಲಡಾಕ್ ಮತ್ತು ರಾಜಸ್ಥಾನದಲ್ಲಿ ನಡೆದಿದೆ. ಚಿತ್ರವನ್ನು ‘ರೈಸ್ ಪಿಕ್ಚರ್ಸ್‍ ಪ್ರೈವೇಟ್ ಲಿಮಿಟೆಡ್‍’ ನಿರ್ಮಿಸಿದ್ದು, ಶಶಾಂಕ್‍ ಉದಪುರ್ಕರ್ ನಿರ್ದೇಶಿಸಿದ್ದಾರೆ. ಶಶಾಂಕ್ ಮರಾಠಿಯ ಜನಪ್ರಿಯ ನಟನಾಗಿದ್ದು ಮೊದಲ ಬಾರಿಗೆ ನಿರ್ದೇಶನಕ್ಕಿಳಿದಿದ್ದಾರೆ. ಅಣ್ಣಾ ಹಜಾರೆಯ ಪಾತ್ರವನ್ನೂ ಅವರೇ ನಿರ್ವಹಿಸಿದ್ದಾರೆ.

‘ದಿ ಕಪಿಲ್ ಶರ್ಮ ಶೋ’ ಕಾರ್ಯಕ್ರಮದಲ್ಲಿ ಅಣ್ಣಾ ಹಜಾರೆ ಸಾಮಾಜಿಕ ಕಾರ್ಯಕರ್ತನಾಗಿ ಬದಲಾಗಲು ಪ್ರೇರೇಪಣೆ ನೀಡಿದ ಘಟನೆ ಮತ್ತು ವ್ಯಕ್ತಿಗಳ ಬಗ್ಗೆ ಮಾತನಾಡಿದ್ದಾರೆ. ಕಪಿಲ್‍ ಶರ್ಮಾರ ಜೋಕ್‍ಗಳಿಗೆ ಅವರು ತಮಾಷೆಯಾಗಿಯೇ ಉತ್ತರಿಸಿದ್ದಾರೆ. ಅಲ್ಲದೆ, ಕಪಿಲ್ ಶರ್ಮಾ ಕಾಮಿಡಿ ಶೋವನ್ನು ಹೊಗಳಿರುವ , ಹಜಾರೆ, ನಾನು ಮತ್ತು ಕಪಿಲ್ ಜನರನ್ನು ನಗಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದಿದ್ದಾರೆಂದು ಮೂಲಗಳು ತಿಳಿಸಿವೆ.

 

Leave a Reply

comments

Related Articles

error: